ರಂಜಾನ್ ಹಬ್ಬದ ಪ್ರಯುಕ್ತ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರೀಕ್ಷೆಗೂ ಮೀರಿ ಜನಸಾಗರ ಹರಿದುಬಂದಿತ್ತು. ಮೈದಾನದಲ್ಲಿ ಸ್ಥಳಾವಕಾಶದ ಕೊರತೆಯಿಂದಾಗಿ, ನೂರಾರು ಜನರು ಅನಿವಾರ್ಯವಾಗಿ ಮೈದಾನದ ಹೊರಗಿನ ರಸ್ತೆಯಲ್ಲೇ ಸಾಲಾಗಿ ನಿಂತು ನಮಾಜ್ ಮಾಡಿದರು.
ಹುಬ್ಬಳ್ಳಿಯ ಈದ್ಗಾ ಮೈದಾನ ಹಾಗೂ ಚೆನ್ನಮ್ನ ಸರ್ಕಲ್ ಬಳಿ ಪ್ಪೈಓವರ್ ಕಾಮಗಾರಿಯಿಂದ. ಜಾಗೆಯ ಕೊರತೆ ಉಂಟಾಗಿತ್ತು. ಮೈದಾನದಲ್ಲಿ ಸ್ಥಳಾವಕಾಶದ ಕೊರತೆ ಹಿನ್ನೆಲೆಯಲ್ಲಿ, ಪ್ರಾರ್ಥನೆಗೆ ಬಂದಿದ್ದ ನೂರಾರು ಜನರು ಅನಿವಾರ್ಯವಾಗಿ ಈದ್ಗಾ ಮೈದಾನದ ಹೊರಗಿನ ರಸ್ತೆಯ ಮೇಲೆಯೇ ಸಾಲಾಗಿ ನಿಂತು ನಮಾಜ್ ಮಾಡಿದರು. ಇಕ್ಕಟ್ಟಾದ ಜಾಗದಲ್ಲಿ ಪ್ರಾರ್ಥನೆ ಸಲ್ಲಿಸಲು ತೊಂದರೆಯಾದ ಕಾರಣ, ರಸ್ತೆಯಲ್ಲೇ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.
ಅಂಜುಮನ್ ಇಸ್ಲಾಂ ಸಮಿತಿ ಅಧ್ಯಕ್ಷ ಎ.ಎಂ.ಹಿಂಡಸಗೇರಿ , ಕಾರ್ಯದರ್ಶಿ ಬಸೀರ್ ಅಹ್ಮದ್ ಎ ಹಳ್ಳೂರು, ಅನೇಕರು ಭಾಗವಸಿದ್ದರು.
