ಧುಪದಾಳ ಗ್ರಾಮದಲ್ಲಿ ರಮಜಾನ್ ಹಬ್ಬದ ಅಂಗವಾಗಿ ಮುಸ್ಲಿಮರು ನಗರದಲ್ಲಿ ಶನಿವಾರ ರಮಜಾನ ಹಬ್ಬವನ್ನು ಶ್ರದ್ಧಾಭಕ್ತಿ ಹಾಗೂ ಸಡಗರಿಂದ ಆಚರಿಸಿದರು. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಗಮನ ಸೆಳೆದರು. ಹಬ್ಬದ ಪ್ರಯುಕ್ತ ಮಸೀದಿಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.
ಹಬ್ಬದ ಪ್ರಯುಕ್ತ ಸಮಾಜದ ಮುಖಂಡರು ಹಿರಿಯರು ಚಿಕ್ಕ ಮಕ್ಕಳು ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ತಮ್ಮ ಬಂಧು–ಬಾಂಧವರು ಹಾಗೂ ಸ್ನೇಹಿತರೊಂದಿಗೆ ಮಸೀದಿ ಬಳಿ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.
ನಗರದ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ನಗರದ ಜಾಮಿಯಾ ಮಸೀದಿಯಿಂದ ಆರಂಭಗೊಂಡ ಖಬರ ಸ್ಥಾನದವರಗೆ ಮೆರವಣಿಗೆಯಲ್ಲಿ ಸಮಾಜದ ಹಿರಿಯರು ಆದಂತ ಮದಾರಸಾಬ ಜಗದಾಳ.ಇಮಾಮಸಾಬ ಬಳಿಗಾರ್ ಮಹಮ್ಮದಸಾಬ ಕಡಲಗಿ. ಗುಡುಸಾಬ ಬಿಸ್ತಿ ರೆಹಮಾನ ಮೂಕಾಸಿ ಲಾಲಾಸಾಬ ಜಗದಾಳ ಮುನ್ನಾ ಮುಲ್ಲಾ ಮದಾರಸಾಬ ಬಳಿಗಾರ ಗೌಸಾಬ ಕೊತ್ವಾಲ ನೂರುದ್ದೀನ್ ಕೊತ್ವಾಲ ಪಜಲುಲ್ಲಾ ಶಾಯನ್ನವರ ರಮ್ಜಾನ್ ಅವಟಿ ಮೊಹಮ್ಮದ್ ಮಾಸ್ತಿ ಹೂಳಿ ಬುಡನಸಾಬ ಹೂಸುರ ಮೀರಾಸಾಬ ಬಳಿಗಾರ ಇಲಿಯಾಸ್ ಬಳಿಗಾರ್ ಮಲೀಕ ಸಾಬ ಸನದಿ ಶಬ್ಬೀರ್ ಜಮಖಂಡಿ.
ಶಮ್ಮು ಭೂಜಗಾರ.ಪೀರಸಾಬ ಕಡಲಗಿ. ಧರ್ಮದ ಗುರುಗಳು. ಸೇರಿದಂತೆ ಸಮುದಾಯದ ಮುಖಂಡರು ರಮಜಾನ್ ಹಬ್ಬದಲ್ಲಿ ಪಾಲ್ಗೊಂಡಿದ್ದರು.
