Vijaypura

ಆಕಾಶದೆತ್ತರಕ್ಕೆ ಚಿಮ್ಮಿದ ಗಂಗೆ; ಬರದನಾಡಿನಲ್ಲೀಗ ಗಂಗೆಯ ನರ್ತನ; ಸಚಿವ ಎಂ.ಬಿ.ಪಾಟೀಲ ಕ್ಷೇತ್ರದಲ್ಲಿ ರೈತರ ಮೊಗದಲ್ಲಿ ಮಂದಹಾಸ

Share

ಹಿಂದೊಂದು ಕಾಲವಿತ್ತು… ವಿಜಯಪುರ ಎಂದರೆ ಬರ – ಬರ ಎಂದರೆ ವಿಜಯಪುರ ಎಂಬ ಮಾತಿತ್ತು. ಸಾವಿರಾರು ಅಡಿ ಆಳ ಕೊರೆದರೂ ನೀರು ಬಾರದೆ, ಬೋರ್ ವೆಲ್ ಕೊರೆಸಿದವರು ಕಣ್ಣೀರಿಡುವ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ.ಪಾಟೀಲ ಜಲಸಂಪನ್ಮೂಲ ಸಚಿವರಾಗಿ ನೀರಾವರಿ ಯೋಜನೆಗಳು, ಕೆರೆ ತುಂಬುವ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಪರಿಣಾಮ ಇಂದು ಆ ಬರದನಾಡೇ ಜಲಸಂಪನ್ನ ನಾಡಾಗಿ ರೂಪಾಂತರಗೊಂಡಿದೆ. ಇಂದು ರೈತರ ಮೊಗದಲ್ಲಿ ನಗು ಮೂಡಿದೆ ಒಂದಾನೊಂದು ಕಾಲದಲ್ಲಿ ಕನಸಾಗಿದ್ದ ಮಲೆನಾಡಿನ ಬೆಳೆಗಳನ್ನೂ ಜಿಲ್ಲೆಯ ರೈತರು ಬೆಳೆದು ಪ್ರಗತಿಯ ದಾರಿಯಲ್ಲಿ ಸಾಗುತ್ತಿದ್ದಾರೆ. ಬಸವನ ನಾಡಿನ ಕೀರ್ತಿ ಎಲ್ಲೆಡೆ ಪಸರಿಸುತ್ತಿದೆ. ಬಬಲೇಶ್ವರ ಕ್ಷೇತ್ರದ ಅರಕೇರಿ ಗ್ರಾಮದ ಅಮಸಿದ್ದ ಭೀಮಸಿಗೌಡ ಬಿರಾದಾರ ಅವರ ಜಮೀನಿನಲ್ಲಿ ಬೋರ್ ವೆಲ್ ಕೊರೆಸುತ್ತಿದ್ದಾಗ ಬಾನೆತ್ತರಕ್ಕೆ ನೀರು ಚಿಮ್ಮಿದ್ದು, ಅವರು ಸಂತಸ ಗೊಂಡಿದ್ದಾರೆ. ಅವರ ಕೃಷಿ ಚಟುವಟಿಕೆಗಳು ಮತ್ತಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ‌.

Tags:

error: Content is protected !!