BELAGAVI

ಬೆಳಗಾವಿಯಿಂದ ದುಬೈಗೆ ವಿಮಾನ ಸೇವೆ ಶೀಘ್ರ ಆರಂಭ: ‘ಬೆಲೆಕ್ಸ್ 2026’ ಉದ್ಘಾಟಿಸಿ ಶಾಸಕ ಅಭಯ್ ಪಾಟೀಲ್ ಘೋಷಣೆ

Share

ಬೆಳಗಾವಿಯ ಕೈಗಾರಿಕಾ ಕ್ಷೇತ್ರಕ್ಕೆ ಹೊಸ ಆಯಾಮ ನೀಡುವ ‘ಬೆಲೆಕ್ಸ್ 2026’ ಪ್ರದರ್ಶನಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಬೆಳಗಾವಿಯ ಆರ್ಥಿಕ ಅಭಿವೃದ್ಧಿ ಹಾಗೂ ಅಂತರಾಷ್ಟ್ರೀಯ ವಿಮಾನಯಾನ ಸಂಪರ್ಕದ ಕುರಿತು ಮಹತ್ವದ ಭರವಸೆಗಳನ್ನು ನೀಡಿದ್ದಾರೆ.

ದಿ ಬೆಲಗಾಮ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಜ್’ನ ವತಿಯಿಂದ ಬೆಲೆಕ್ಸ್ 2026ನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ದಕ್ಷಿಣ ಶಾಸಕ ಅಭಯ್ ಪಾಟೀಲ್, ಮಹಾರಾಷ್ಟ್ರದ ಜೈನ ಅಲ್ಪ ಸಂಖ್ಯಾತರ ಇಲಾಖೆಯ ಸಚಿವರಾದ ಲಲೀತ್ ಗಾಂಧಿ ಉಪಸ್ಥಿತರಿದ್ಧರು, ಗೌರವ ಅತಿಥಿಗಳಾಗಿ ಅಶೋಕ್ ಐರನ್ ಗ್ರೂಪ್’ನ ಎಂ.ಡಿ. ಜಯಂತ್ ಹುಂಬರವಾಡಿ, ಗೋವಾ ಚೇಂಬರ್ ಆಫ್ ಕಾರ್ಮಸ್’ನ ಅಧ್ಯಕ್ಷತೆ ಪ್ರತೀಮಾ ಧೋಂಡ ಉಪಸ್ಥಿತರಿದ್ಧರು. ಗಣ್ಯರ ಹಸ್ತದಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.

ಈ ವೇಳೆ ಮಾತನಾಡಿದ ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು, ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿಗೆಯಾಗುತ್ತಿದೆಯೋ ಇಲ್ಲವೋ ಎಂಬುದರ ಅವಲೋಕನವನ್ನು ಮಾಡಬೇಕಿದೆ. ಕೈಗಾರಿಕೆಗಳ ಬೆಳವಣಿಗೆ ಕುಂಠಿತಗೊಳ್ಳುವಲ್ಲಿ ಸರ್ಕಾರಗಳನ್ನು ಹೊಣೆ ಮಾಡಲಾಗುತ್ತದೆ. ಆದರೇ, ಸರ್ಕಾರದ ಮೇಲೆ ಒತ್ತಡ ತರುವ ಕೆಲಸವನ್ನು ಕೈಗಾರಿಕೋದ್ಯಮಿಗಳು ಮಾಡಬೇಕಿದೆ. ಬಿಯಾಂಡ್ ಬೆಂಗಳೂರು ಕೇವಲ ಹುಬ್ಬಳ್ಳಿ ವರೆಗೆ ವಿಸ್ತರಿಸಿದೆ. ಅಲ್ಲಿ ಏಕತೆಯಿದೆ. ಇಲ್ಲಿ ಏಕತೆಯ ಕೊರತೆಯಿದೆ. ಕೈಗಾರಿಕೋದ್ಯಮಿಗಳು ಕಾರ್ಯಕ್ರಮಗಳಲ್ಲಿ ಭಾಗಿಯಾಗಲ್ಲ. ಐಟಿ ಪಾರ್ಕ್’ಗಾಗಿ 3 ಬಾರಿ ವಿಧಾನಸಭೆಯಲ್ಲಿ ಪ್ರಸ್ತಾವಣೆಯನ್ನು ಸಲ್ಲಿಸಲಾಗಿದೆ. ಸರ್ಕಾರದ ಗಮನ ಸೆಳೆಯುವ ಕೆಲಸವನ್ನು ಮಾಡಬೇಕಿದೆ. ಬೆಳಗಾವಿಯಲ್ಲಿ ಆರ್ಥಿಕಮಟ್ಟವನ್ನು ಸುಧಾರಿಸುವ ಕೆಲಸವಾಗಬೇಕಿದೆ ಎಂದರು.

ಮುಂದುವರೆದು ಮಾತನಾಡದಿ ಅವರು, ನ್ಯೂನ್ಯತೆಗಳನ್ನು ದೂರವಾಗಿಸಲು ನಾವು ಸದಾ ಬದ್ಧರಾಗಿದ್ದೇವೆ. ಉದ್ಯಮಬಾಗ ಬೆಳಗಾವಿಯ ಕಾರ್ಮಿಕ ಬದುಕಿನ ಆಸರೆಯಾಗಿದೆ. ಸರ್ಕಾರದ ಕೆಲಸವನ್ನು ಕೈಗಾರಿಕೋದ್ಯಮಿಗಳು ಮಾಡಿ, ಹಲವರಿಗೆ ಉದ್ಯೋಗವನ್ನು ನೀಡಿದ್ದಾರೆ. ಕೈಗಾರಿಕೆಯ ಬಗ್ಗೆ ವಿದ್ಯಾರ್ಥಿಗಳ ಯೋಚನೆಗಳು ಎಂಬ ಸರ್ವೆಕ್ಷಣವನ್ನು ಆರಂಭಿಸಲಾಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದು, ಕೇಲವೇ ದಿನಗಳಲ್ಲಿ ಬೆಳಗಾವಿಯಿಂದ ದುಬೈಗೆ ವಿಮಾನಸೇವೆಯನ್ನು ಆರಂಭಿಸುವ ಭರವಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬೆಲಗಾಮ್ ಚೇಂಬರ್ ಆಫ್ ಕಾಮರ್ಸ್’ನ ಅಧ್ಯಕ್ಷ ಪ್ರಭಾಕರ ನಾಗರಮುನ್ನೋಳ್ಳಿ, ಕಾರ್ಯದರ್ಶಿ ಸತೀಶ್ ಕುಲಕರ್ಣಿ, ಇವ್ಹೇಂಟ್ ಚೇರಮನ್ ಉದಯ್ ಜೋಷಿ, ಇವ್ಹೇಂಟ್ ಕೋ-ಚೇರಮನ್ ವಿಕ್ರಮ್ ಜೈನ್ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!