Dharwad

ಧಾರವಾಡ ಜನ್ನತ ನಗರ ಬಳಿಯ ತ್ಯಾಜ್ಯ ವಿಲೇವಾರಿ ಕಸಕ್ಕೆ ಬೆಂಕಿ..

Share

ಧಾರವಾಡದ ಜನ್ನತ್ ನಗರದಲ್ಲಿರುವ ತ್ಯಾಜ್ಯ ವಿಲೇವಾರಿ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿಯುತ್ತಿದ್ದು, ಇದರಿಂದ ವಿಷಮ ಬೆಂಕಿ ಹೋಗೆಯಿಂದ ಸ್ಥಳೀಯ ಜನರು ಹೈರಾಣಾಗಿದ್ದಾರೆ.

ಹೌದು…ದಶಕಗಳ ಹಿಂದೆ ಈ ತ್ಯಾಜ್ಯ ವಿಲೇವಾರಿ ಘಟಕ ನಗರದ ಹೊರಗಡೆ ಇತ್ತು, ಆದರೆ ಈಗ ನಗರ ಬೆಳೆದಂತೆ ಈ ತ್ಯಾಜ್ಯ ವಿಲೇವಾರಿ ಘಟಕ ಧಾರವಾಡ ಮಧ್ಯಭಾಗದಲ್ಲಿದೆ. ನಿತ್ಯ ಸಂಜೆ ಮುಂಜಾನೆ ಆದರೆ ಸಾಕು, ಇಲ್ಲಿಯ ಜನ ಕಸದ ಗುಡ್ಡಕ್ಕೆ ಹಚ್ಚುವ ಬೆಂಕಿ ವಿಷಮ ಗಾಳಿಯನ್ನೇ ಸೇವಿಸಬೇಕಾಗಿದೆ. ಕಸದ ಗುಡ್ಡದ ಬೆಂಕಿಯ ಹೋಗೆಯಿಂದ ಸ್ಥಳೀಯ ಜನರು ಹೈರಾಣಾಗಿದ್ದು, ಪ್ರತಿನಿತ್ಯ ಇಲ್ಲಿಯ ಜನರು ಧಾರವಾಡದ ಜನಪ್ರತಿನಿಧಿಗಳು ಸೇರಿ‌ ಪಾಲಿಕೆಯ ಅಧಿಕಾರಿಗಳ ವಿರುದ್ಧ ಹಿಡಿ ಶಾಪ ಹಾಕುವುದು ಸಾಮಾನ್ಯವಾಗಿದೆ. ಈ ತ್ಯಾಜ್ಯ ವಿಲೇವಾರಿ ಘಟಕದ ವಿದ್ಯಾಗಿರಿ, ಗಾಂಧಿ ನಗರ, ಹೊಸ ಯಲ್ಲಾಪುರ, ಟೋಲ್ ನಾಖಾ ಸೇರಿದಂತೆ ವಿವಿಧ ಕಡೆಗಳಲ್ಲಿ ನಿತ್ಯ ದಟ್ಟ ಹೊಗೆ ಆವರಿಸಿಕೊಂಡು ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಕಳೆದ ಗುರುವಾರ ಹಾಗೂ ಇಂದು ಶುಕ್ರವಾರವೂ ಕೂಡಾ ಕಸದ ಗುಡ್ಡಕ್ಕೆ ಬೆಂಕಿ ಹೊತ್ತಿಕೊಂಡು ಧಗ ಧಗ ಉರಿಯುತ್ತಿದ್ದರೂ ಯಾರೂ ಸ್ಪಂದಿಸುತ್ತಿಲ್ಲ, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಸಹ ಸ್ಥಳಕ್ಕೆ ಬಂದಿಲ್ಲ ಎಂದು ಜನರು ತಮ್ಮ ಆಕ್ರೋಶ ಹೊರ ಹಾಕುತ್ತಿದ್ದಾರೆ. ದಟ್ಟ ಹೊಗೆ ಹಾಗೂ ಬೆಂಕಿ ಅಕ್ಕ ಪಕ್ಕದ ಮನೆಗಳಿಗೆ ಆವರಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಬೇಕು ಎಂಬುವುದು ಆಗ್ರಹವಾಗಿದೆ. ಇಲ್ಲವಾದಲ್ಲಿ ಪಾಲಿಕೆ ಹಾಗೂ ಡಿಸಿ ಕವೇರಿಯ ಮುಂಭಾಗದಲ್ಲಿ ಹೋರಾಟಕ್ಕೆ ಚಿಂತನೆ ಮಾಡುವುದಾಗಿ ಸ್ಥಳೀಯ ಜನತೆ ಎಚ್ಚರಿಕೆ ನೀಡಿದ್ದಾರೆ.

Tags:

error: Content is protected !!