BELAGAVI

ಮಾರ್ಕಂಡೇಯ ನದಿ ಉಳಿಸಲು ರೈತ ಸಂಘದ ಪಣ: ಮಣ್ಣೂರ್ ರಸ್ತೆಯಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ!

Share

“ಜೀವನದಿಗಳನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಈ ನಿಟ್ಟಿನಲ್ಲಿ ಬೆಳಗಾವಿಯ ಮಾರ್ಕಂಡೇಯ ನದಿಯ ಪುನಶ್ಚೇತನಕ್ಕಾಗಿ ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘ ಹಾಗೂ ‘ಮಾರ್ಕಂಡೇಯ ಉಳಿಸಿ’ ತಂಡ ಇಂದು ವಿಶೇಷ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ಪರಿಸರ ಪ್ರೇಮ ಮೆರೆದಿದೆ.”

ಮಾರ್ಚ್ 15 ರವಿವಾರದಂದು ಬೆಳಗಾವಿಯ ಮಣ್ಣೂರ್-ಅಂಬೆವಾಡಿ ರಸ್ತೆಯ ಹಿಂಡಲಗಾ ಪಂಪ್ ಹೌಸ್ ಪಕ್ಕದಲ್ಲಿ ಹರಿಯುವ ಮಾರ್ಕಂಡೇಯ ನದಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕರ್ನಾಟಕ ರಾಜ್ಯ ರೈತಪರ ಹೋರಾಟ ಸಂಘ ಹಾಗೂ ‘ಮಾರ್ಕಂಡೇಯ ಉಳಿಸಿ’ ತಂಡದ ವತಿಯಿಂದ ಆಯೋಜಿಸಲಾಗಿದ್ದ ಈ ಅಭಿಯಾನವು ಕೃಷ್ಣ ಹಿತ್ತಲಮನಿ ಅವರ ನೇತೃತ್ವದಲ್ಲಿ ಜರುಗಿತು. ಸಮಾಜ ಸೇವಕರಾದ ಆಕಾಶ್ ಹಲಗೆಕರ್ ಅವರು ಈ ಕಾರ್ಯಕ್ಕೆ ಪೂರ್ಣ ಬೆಂಬಲ ನೀಡುವ ಮೂಲಕ ಪರಿಸರ ಉಳಿಸುವ ಹೋರಾಟದಲ್ಲಿ ಕೈಜೋಡಿಸಿದರು.

ನದಿಯಲ್ಲಿ ಶೇಖರಣೆಯಾಗಿದ್ದ ಪ್ಲಾಸ್ಟಿಕ್ ಹಾಗೂ ತ್ಯಾಜ್ಯಗಳನ್ನು ತೆರವುಗೊಳಿಸಿದ ಹೋರಾಟಗಾರರು, ನದಿ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಕಾಶಿನಾಥ ಕೊಪ್ಪದ, ದೇವಿಯಾನಿ ಪಾಟೀಲ, ಪ್ರವೀಣ ದೇವರಮನಿ, ಪ್ರತಾಪ್ ಕಾಂಬಳೆ, ಬಾವಕಣ್ಣ ಪಿರಗನೆ, ಶಂಕರ್ ಕಾಂಬಳೆ, ಗಜಾನನ ಮೇತ್ರಿ, ಶ್ವೇತಾ ಕೋಟಿಯಾನ ಹಾಗೂ ಸಾನಿಕಾ ತೆರಸೆ ಸೇರಿದಂತೆ ಅನೇಕ ಪರಿಸರ ಪ್ರೇಮಿಗಳು ಶ್ರಮದಾನ ಮಾಡಿದರು. ನದಿಗಳ ರಕ್ಷಣೆಗಾಗಿ ಇಂತಹ ಅಭಿಯಾನಗಳು ಮುಂದಿನ ದಿನಗಳಲ್ಲೂ ಮುಂದುವರಿಯಲಿವೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

Tags:

error: Content is protected !!