ಬೆಳಗಾವಿ ತಾಲೂಕಿನ ಬೆಕ್ಕಿನಕೇರಿ ಗ್ರಾಮದ ದೇವಸ್ಥಾನದ ಜಾಗದಲ್ಲಿ ಮೇವು ಒಟ್ಟಿದ್ದಕ್ಕೆ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದವರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಇಲ್ಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಸೋಮವಾರ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಗ್ರಾಮೀಣ ಮತಕ್ಷೇತ್ರ ವ್ಯಾಪ್ತಿಗೆ ಬರುವ ಬೆಕ್ಕಿನಕೇರಿ ಗ್ರಾಮ. ನಾಗನಾಥ ದೇವಸ್ಥಾನದ ಆವರಣದಲ್ಲಿ ಮೇವು ಒಟ್ಟಿಕೊಂಡಿದ್ದ ರೈತರು. ಮೇವು ಅಲ್ಲಿಂದ ತೆಗೆಯಿರಿ ಇಲ್ಲವಾದರೆ ಅದಕ್ಕೆ ಬೆಂಕಿ ಇಡ್ತಿವಿ ಎಂದು ಗ್ರಾಮದ ಕೆಲ ಪುಡಿರೌಡಿಗಳಿಂದ ಧಮ್ಕಿ ಆರೋಪ ಮಾಡಿದ್ದಾರೆ. ಹರಿದ ಸ್ವೇಟರ್ ಹಾಕಿಕೊಂಡೆ ಪೊಲೀಸ್ ಕಮಿಷನರ್ ಗೆ ಭೇಟಿಯಾಗಲು ಬಂದ ಮಹಿಳೆ ಕಾಕತಿ ಪೊಲೀಸರ ಮೊರೆ ಹೋದರೂ ಸಹ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ಬೆಕ್ಕಿನಕೆರೆ ಗ್ರಾಮದ ನಾಗನಾಥ ದೇವಸ್ಥಾನದ ಸುಮಾರು ಮೂರುವರೆ ಎಕರೆ ಜಾಗವಿದೆ. ಆದರೇ ರೈತರೇ ಅದನ್ನ ಮೊದಲಿನಿಂದ ಬಳಸುತ್ತಾರೆ. 60 ವರ್ಷದ ಬಳಿಕ ಗ್ರಾಮದೇವತೆ ಲಕ್ಷ್ಮೀ ದೇವತೆ ಜಾತ್ರೆಯ ಹಿನ್ನೆಲೆ ಆ ಜಾಗವನ್ನು ಖಾಲಿ ಮಾಡಿಕೊಡಲಾಗಿತ್ತು. ಆದರೇ, ಲಕ್ಷ್ಮೀ ದೇವಸ್ಥಾನ ಕಮೀಟಿಯ ಅಧ್ಯಕ್ಷ ಸಾವಂತ ಜಾಗೆಯನ್ನು ತಮ್ಮ ಸ್ವಾಧೀನಕ್ಕೆ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಇನ್ನು ರೈತ ಹೋರಾಟಗಾರ ಪ್ರಕಾಶ್ ನಾಯಿಕ ಅವರು ರಾಜಕೀಯ ಪ್ರೇರಿತವಾಗಿ ಲಕ್ಷ್ಮೀ ದೇವಸ್ಥಾನದ ಹೆಸರಿನಲ್ಲಿ ದಬ್ಬಾಳಿಕೆಯನ್ನು ಮಾಡುತ್ತಿದ್ದಾರೆ. ಮನೆಗೆ ಹೊಕ್ಕು ಅವರು ಮಹಿಳೆಯರು ಮತ್ತು ವೃದ್ಧೆಯರ ಮೇಲೆ ಹಲ್ಲೆ ನಡೆಸಿದ್ದಾರೆ. ಕಾಕತಿ ಠಾಣೆಗೆ ದೂರು ನೀಡಿದರೂ ಕ್ರಮಕೈಗೊಂಡಿಲ್ಲ. ಇದರ ವಿರುದ್ಧ ಕ್ರಮಕೈಗೊಳ್ಳಬೇಕು. ಸರ್ಕಾರ ಕ್ರಮಕೈಗೊಳ್ಳಬೇಕೆಂದು ಆಗ್ರಹಸಿದರು.
ಈ ಸಂದರ್ಭದಲ್ಲಿ ಶಿವಾಜೀರಾವ್ ಬೋಗಾನ್,ಶಿವಾಜೀರಾವ್ ಪಾಟೀಲ್,ಜಯವಂತ ಸಾವಂತ್,ನವನಾಥ್ ಗಾವಡೆ,ಸುನೀಲ್ ಗಾವಡೆ ಮೇಲೆ ಆರೋಪ ಮಾಡಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
