ರಾಜ್ಯದಲ್ಲಿ ಅಕ್ರಮ ಮದ್ಯದ ದಂಧೆ ಮಿತಿಮೀರುತ್ತಿದೆಯೇ? ಗೋವಾ ಹಾಗೂ ನೆರೆ ರಾಜ್ಯಗಳಿಂದ ಬರುವ ನಕಲಿ ಮದ್ಯದ ಹಾವಳಿಗೆ ಗಡಿ ಭಾಗದ ಯುವಕರು ಬಲಿಯಾಗುತ್ತಿದ್ದಾರೆಯೇ? ಈ ಬಗ್ಗೆ ವಿಧಾನ ಪರಿಷತ್ತಿನಲ್ಲಿಂದು ಸದಸ್ಯರಾದ ನಾಗರಾಜು ಯಾದವ್ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ನಕಲಿ ಮದ್ಯ ತಡೆಯುವಲ್ಲಿ ಅಬಕಾರಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಸದಸ್ಯ ನಾಗರಾಜು ಎಂ., ಅವರು ಅಬಕಾರಿ ಇಲಾಖೆ ಕಳೆದ ಬಾರಿ ಕರ್ನಾಟಕ ರಾಜ್ಯ ಇಟ್ಟುಕೊಂಡಿದ್ದ ಆರ್ಥಿಕ ಗುರಿಯನ್ನು ಮುಟ್ಟಿಲ್ಲ. ಗುರಿ ಮುಟ್ಟಲಿ ಬಿಡಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಎಲ್ಲೋ ಸಂತಸವನ್ನು ಮೂಡಿಸಿತ್ತಾದರೂ, ನಕಲಿ ಮದ್ಯ, ಗೋವಾದ ಸಿ.ಎಚ್. ಪೌಡರ್ ಬಳಿಸ ತಯಾರಿಸುತ್ತಿರುವ ಮದ್ಯ, ರಾಯಚೂರು ಮತ್ತು ಬೆಳಗಾವಿ ಮಾರ್ಗವಾಗಿ ಅಕ್ರಮ ಮದ್ಯವನ್ನು ತಂದು ಸೇವಿಸಲಾಗುತ್ತಿದೆ. ಇದರ ವಿರುದ್ಧ ಅಬಕಾರಿ ಇಲಾಖೆ ಕ್ರಮಕೈಗೊಂಡಿಲ್ಲ. ಗಡಿ ಭಾಗದಲ್ಲಿ ಯುವಕರು ಬೇರೆ ರಾಜ್ಯಕ್ಕೆ ಉದ್ಯೋಗಕ್ಕಾಗಿ ಹೋಗಿ ಮದ್ಯವ್ಯಸನಿಗಳಾಗುತ್ತಿದ್ದಾರೆ. ಇದರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದರು.
ಇದಕ್ಕೆ ಅಬಕಾರಿ ಸಚಿವ ತಿಮ್ಮಾಪೂರ್ ಅವರ ಪರವಾಗಿ ಸಭಾನಾಯಕರಾದ ಸಣ್ಣ ನೀರಾವರಿ ಸಚಿವ ಎನ್. ಎಸ್. ಭೋಸರಾಜು ಅವರು ಪ್ರತಿಕ್ರಿಯಿಸಿ, ಕಳೆದ ಬಾರಿಗಿಂತಲೂ 4 ಸಾವಿರಕ್ಕೂ ಹೆಚ್ಚು ಕೋಟಿ ಲಾಭವನ್ನು ಅಬಕಾರಿ ಇಲಾಖೆ ಗಳಿಸಿದೆ. ಆಂಧ್ರದಲ್ಲಿ ಮದ್ಯದ ಬೆಲೆ ಇಳಿತದ ಹಿನ್ನೆಲೆ ರಾಜ್ಯದಿಂದ ಖರೀದಿಸುವುದು ಕಡಿಮೆಯಾಗಿದೆ. ಅಲ್ಲದೇ ಈ ಬಾರಿ ಮಳೆ ಮತ್ತು ಚಳಿ ಹೆಚ್ಚಾದ ಹಿನ್ನೆಲೆ ಬಿಯರ್ ಬೇಡಿಕೆ ಕಡಿಮೆಯಾಗಿದೆ. ಬೆಳಗಾವಿ ಮತ್ತು ರಾಯಚೂರು ಗಡಿಯಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಸಂಬಂಧಿಸಿದಂತೆ ರಾಯಚೂರಿನಲ್ಲಿ ಐವರ ವಿರುದ್ಧ ಕ್ರಮಕೈಗೊಂಡಿದ್ದು, ಓರ್ವನನ್ನು ಗಡಿಪಾರು ಮಾಡಲಾಗಿದೆ ಎಂದರು. ಬೈಟ್
