Kagawad

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ.

Share

ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ಲಕ್ಕವ್ವಾ ಸುರೇಶ್ ಅಡಿಕೇರಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಜಯಶ್ರೀ ವಿಜಯ ಹರಳೆ, ಇವ್ರುರು ಅವಿರೋಧವಾಗಿ ಆಯ್ಕೆಗೊಂಡರು. ಐನಾಪುರ್ ಪಟ್ಟಣ ಪಂಚಾಯಿತಿಯ ನಿಕಟ್ ಪೂರ್ವ ಅಧ್ಯಕ್ಷೆ ಶ್ರೀಮತಿ ಕಸ್ತೂರಿ ಮಡಿವಾಳರ್, ಅವರು ಹಾಗೂ ಉಪಾಧ್ಯಕ್ಷ ರತ್ನವ್ವಾ ಸದಾಶಿವ್ ಮಾದರ್ ಇವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರಿಂದ ತರುವಾದ ಸ್ಥಳಕ್ಕೆ ಚುನಾವಣೆ ಜರುಗಿದೆ.

ಚುನಾವಣೆ ಅಧಿಕಾರಿಗಳಾಗಿ ಕಾಗವಾಡ ತಹಸಿಲ್ದಾರ್ ರವೀಂದ್ರ ಹಾದಿಮನಿ ಕಾರ್ಯ ನಿರ್ವಹಿಸಿದರು.

ಐನಾಪುರ್ ಪಟ್ಟಣ ಪಂಚಾಯಿತಿಯಲ್ಲಿ ಕಾಗವಾಡ ಕ್ಷೇತ್ರ ಶಾಸಕ ರಾಜು ಕಾಗೆ ಇವರ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷದ ಬೆಂಬಲಿತ ಒಟ್ಟು 13 ಸದಸ್ಯರು ಹಾಜರಿದ್ದರು. ಬಿಜೆಪಿ ಪಕ್ಷದ ಸದಸ್ಯರು ಹಾಜರಿದ್ದರು. ಐನಾಪುರ್ ಪಟ್ಟಣದ ಗಾಣಿಗೇರ್ ಕುಟುಂಬದ ಯುವ ನಾಯಕರಾದ ಅರುಣ್ ಗಾಣಿಗೇರ್, ಪ್ರವೀಣ ಗಾಣಿಗೇರ್, ಇವರ ನೇತೃತ್ವದಲ್ಲಿ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಕಾರ್ಯಕ್ರಮಕ್ಕೆ ನೆರವೇರಿತು.

ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯರಾದ ಸಂಜಯ್ ಬಿರಡಿ, ಕುಮಾರ್ ಜಯಕರ, ರಾಜು ಹರಳೆ, ದರೆಪಾ ಹರಳೆ, ಶ್ರೀಮತಿ ಕಸ್ತೂರಿ ಮಡಿವಾಳರ, ಶ್ರೀಮತಿ ಸರೋಜಿನಿ ಸುರೇಶ ಗಾಣಿಗೇರ್, ರತ್ನವ್ವಾ ಮಾದರ್, ದಾದಾ ಜಂತನವರ್ ಪ್ರಕಾಶ್ ನಾಯಕ್ ಸುರೇಶ ಅಡಿಶೇರಿ, ಇಸಾಕ್ ರಾವತ್, ಸಂಜಯ್ ಕುಸನಾಳೆ ಪ್ರಕಾಶ್ ಚಿನಗಿ, ಗುರು ಮಡಿವಾಳರ್ ಸೇರಿದಂತೆ ಅನೇಕ ಕಾರ್ಯಕರ್ತರು ಗುಲಾಲ ಎರಚಿ ಸಿ ಹಂಚಿ ಸಂಭ್ರಮ ಆಚರಿಸಿದ್ದರು.

Tags:

error: Content is protected !!