Dharwad

ಪೇಢಾ ನಗರಿ ಧಾರವಾಡದಲ್ಲಿ ದೀಪಾವಳಿ ಸಂಭ್ರಮ: ಟೀಮ್ ಇಂಡಿಯಾ ವಿಶ್ವಕಪ್ ಗೆಲುವಿಗೆ ಕವಿವಿ ವಿದ್ಯಾರ್ಥಿಗಳ ಬಹುಪರಾಕ್

Share

• ಮೂರನೇ ಬಾರಿಗೆ ಟಿ-20 ವಿಶ್ವ ಚಾಂಪಿಯನ್
• ಧಾರವಾಡದಲ್ಲಿ ಅಭಿಮಾನಿಗಳಿಂದ ಪಟಾಕಿ ಸಂಭ್ರಮ
• ಕವಿವಿ ವಿದ್ಯಾರ್ಥಿಗಳಿಂದ ಗೆಲುವಿನ ವಿಜಯೋತ್ಸವ
• ಪೇಢಾ ನಗರಿಯ ರಸ್ತೆಗಳಲ್ಲಿ ದೀಪಾವಳಿ ಸಡಗರ

ಟಿ-20 ವಿಶ್ವಕಪ್ ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿ ಭಾರತ ಮೂರನೇ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದೆ. ಈ ಐತಿಹಾಸಿಕ ಜಯದ ಬೆನ್ನಲ್ಲೇ ಪೇಢಾ ನಗರಿ ಧಾರವಾಡದಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ವಿದ್ಯಾರ್ಥಿಗಳು ರಸ್ತೆಯಲ್ಲೇ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದ್ದಾರೆ.
ಭಾರತ ತಂಡ ಟಿ-20 ವಿಶ್ವಕಪ್ ಮುಡಿಗೇರಿಸಿಕೊಳ್ಳುತ್ತಿದ್ದಂತೆ ಧಾರವಾಡದಾದ್ಯಂತ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ರೋಚಕ ಪಂದ್ಯದಲ್ಲಿ ಭಾರತದ ಅಮೋಘ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನಕ್ಕೆ ಧಾರವಾಡಿಗರು ಫಿದಾ ಆಗಿದ್ದಾರೆ. ಅಭಿಮಾನಿಗಳು ರಸ್ತೆಯಲ್ಲೇ ದೀಪಾವಳಿ ಚಕ್ರಗಳನ್ನು ಹಚ್ಚಿ, ಪಟಾಕಿ ಸಿಡಿಸುವ ಮೂಲಕ ಅಕ್ಷರಶಃ ದೀಪಾವಳಿ ಸಂಭ್ರಮವನ್ನು ಸೃಷ್ಟಿಸಿದರು. ತಂಡದ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಸಾವಿರಾರು ಜನರು ರಸ್ತೆಗಿಳಿದು ಪರಸ್ಪರ ಪೇಢಾ ಹಂಚಿ ಹರ್ಷ ವ್ಯಕ್ತಪಡಿಸಿದರು.
ಧಾರವಾಡದ ಶ್ರೀನಗರ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ (ಕವಿವಿ) ವಿದ್ಯಾರ್ಥಿಗಳು ತಂಡೋಪತಂಡವಾಗಿ ಬಂದು ವಿಜಯೋತ್ಸವದಲ್ಲಿ ಭಾಗಿಯಾದರು. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು “ಭಾರತ್ ಮಾತಾ ಕೀ ಜೈ” ಎಂಬ ಘೋಷಣೆಗಳನ್ನು ಕೂಗುತ್ತಾ ವಿದ್ಯಾರ್ಥಿಗಳು ನೃತ್ಯ ಮಾಡಿದರು. ಇಡೀ ಧಾರವಾಡ ನಗರವು ಇಂದು ಕ್ರಿಕೆಟ್ ಜ್ವರದಲ್ಲಿ ಮಿಂದೆದ್ದಿದ್ದು, ಭಾರತ ತಂಡ ಸೃಷ್ಟಿಸಿದ ಈ ದೀಪಾವಳಿ ಸಂಭ್ರಮಕ್ಕೆ ಯುವ ಸಮೂಹ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಿದೆ.

Tags:

error: Content is protected !!