Dharwad

ಧಾರವಾಡದಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ರೋಡ್ ರೋಲರ್…. ಚಾಲಕನ ನಿಯಂತ್ರಣ ತಪ್ಪಿ ಗೋಡೆ ಧ್ವಂಸಗೊಳಿಸಿದ ರೋಡ್ ರೋಲರ್

Share

• ಧಾರವಾಡದಲ್ಲಿ ನಿಯಂತ್ರಣ ತಪ್ಪಿದ ರೋಡ್ ರೋಲರ್
• ಪೊಲೀಸ್ ಠಾಣೆಯ ಕಂಪೌಂಡ್ ಗೋಡೆ ಧ್ವಂಸ
• ತಪ್ಪಿದ ಭಾರಿ ಅನಾಹುತ: ಪೊಲೀಸರು ಸುರಕ್ಷಿತ
• ಚಾಲಕನ ನಿರ್ಲಕ್ಷ್ಯದ ವಿರುದ್ಧ ಪೊಲೀಸರ ತನಿಖೆ

ಚಾಲಕನ ನಿಯಂತ್ರಣ ತಪ್ಪಿ ಪೊಲೀಸ್ ಠಾಣೆಗೆ ನುಗ್ಗಿದ ರೋಡ್ ರೋಲರ್ ಪೊಲೀಸ್ ಠಾಣೆಯ ಕಂಪೌಂಡ್ ಗೋಡೆಯನ್ನು ಧ್ವಂಸಗೊಳಿಸಿದ ಘಟನೆ ಧಾರವಾಡದ ವಿದ್ಯಾಗಿರಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ರಸ್ತೆ ಕಾಮಗಾರಿ ನಡೆಯುತ್ತಿರುವುದರಿಂದ ಅಲ್ಲಿಗೆ ರೋಡ್ ರೋಲರ್ ತರಲಾಗಿತ್ತು. ನಿನ್ನೆ ರಾತ್ರಿ ರೋಲರ್ ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ವಿದ್ಯಾಗಿರಿ ಪೊಲೀಸ್ ಠಾಣೆಯ ಹಿಂಭಾಗದ ಜಾಗದಲ್ಲಿ ನುಗ್ಗಿದೆ. ಇದ್ದ ಕಂಪೌಂಡ್‌ನ್ನೂ ರೋಲರ್ ಧ್ವಂಸಗೊಳಿಸಿ ಬಂದಿದ್ದರಿಂದ ಠಾಣೆಯಲ್ಲಿದ್ದ ಪೊಲೀಸ್ ಸಿಬ್ಬಂದಿ ಕ್ಷಣ ಕಾಲ ವಿಚಲಿತರಾಗಿದ್ದಾರೆ. ಅದೃಷ್ಟವಶಾತ್ ಕಂಪೌಂಡ್ ಗೊಡೆ ಧ್ವಂಸಗೊಳಿಸಿ ರೋಲರ್ ಮುಂದೆ ಸಾಗಲಾರದೇ ಹಾಗೇ ನಿಂತಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

Tags:

error: Content is protected !!