ಟ್ರ್ಯಾಕ್ಟರನ ಅಡಿಯಲ್ಲಿ ಸಿಲುಕಿ ಚಾಲಕನೋರ್ವನ ಸಾವನ್ನಪ್ಪಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ-ಗಳತಗಾ ರಸ್ತೆಯಲ್ಲಿ ನಡೆದಿದೆ.
ಸುಧಾಕರ ಕೊಂಡೆಕರ (೩೮) ಸಾವನ್ನಪ್ಪಿದ ಚಾಲಕ.ಗಳತಗಾ ಗ್ರಾಮ ರೈತರಾದ ಸುಧಾಕರ ಕೊಂಡೇಕರ ಹಾಗೂ ಸಂಜಯ ಚೌಗುಲೆಯವರು ಹೊಸದಾಗಿ ತಂದ ಟ್ರ್ಯಾಕ್ಟರಿಗೆ ರೋಟರ್ ಮಶೀನವನ್ನು ತರಲು ಹೋಗಿ ಬರುವಾಗ ನಿನ್ನೆ ಸಾಯಂಕಾಲ ಸಮಯದಲ್ಲಿ ಹಿಂದುರುವಾಗ ಕಾರದಗಾ ಗಳತಗಾ ಸೇತುವೆಯ ಮುಂಭಾಗದಲ್ಲಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ ಟೇಲರ್ ಐದರಿಂದ ಆರು ಅಡಿಯವರೆಗೆ ಬಿದ್ದಿದೆ.
ಪರಿಣಾಮ ಟ್ರ್ಯಾಕ್ಟರನ ಅಡಿಯಲ್ಲಿ ಸಿಲುಕಿ ಸುಧಾಕರ ಕೊಂಡೇಕರ ಸ್ಥಳದಲ್ಲೇ ಸಾವನ್ನಪ್ಪಿದರು.ಗಂಭೀರವಾಗಿ ಗಾಯಗೊಂಡ ಸಂಜಯ ಚೌಗಲೆಯವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
