ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಬಡವರ ಪಾಲಿನ ಸಂಜೀವಿನಿ ಎಂದೆ ಖ್ಯಾತಿ ಪಡೆಯುತ್ತಿದೆ. ಇಲ್ಲಿನ ವೈದ್ಯರು ಅದೆಷ್ಟೊ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ. ಅದೇ ರೀತಿ ಕೂಡ ಜಗತ್ತಿನ ಅಪರೂಪದ ಖಾಲೆಯಾದ ಸರ್ವೈಕಲ್ ಫೈಬ್ರೋ ಎಪಿಥೀಲಿಯಲ್ ಪಾಲಿಪ್‌ನ ಎಂಬ ರೋಗದಿಂದ ಬಳಲುತ್ತಿದ್ದ ಮಹಿಳೆ ಚಿಟಗುಪ್ಪಿ ಆಸ್ಪತ್ರೆ ವೈದ್ಯರು ಆಫರೇಶನ್ ಮಾಡುವುದರ ಮೂಲಕ ಮಹಿಳೆ ಜೀವ ಉಳಿಸಿದ್ದಾರೆ. ಅದರ ಜೊತೆಗೆ 5 ಜನ ಮಹಿಳೆಯರ ಕ್ಲಿಷ್ಟಕರ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.


ಹೌದು,,, ಮುಂಬೈ ಮೂಲದ ಮಹಿಳೆಯೊಬ್ಬಳು ಹೊಟ್ಟೆಯಲ್ಲಿ ಗಡ್ಡೆ ಬೆಳೆದು ದಿನಂಪ್ರತಿ ಬಳಲುತ್ತಿದ್ದಳು, ಆ ಮಹಿಳೆ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಅವರನ್ನು ಸಂಪರ್ಕಿಸಿದ್ದಾಳೆ. ಪರೀಕ್ಷೆ ಮಾಡಿದ ವೈದ್ಯರು ಇದು ಹೊಟ್ಟೆಯಲ್ಲಿ ಗಡ್ಡೆ ಬೆಳೆದಿದ್ದು ಕಂಡು ಬಂದಿದೆ. ಕೂಡಲೆ ಶಸ್ತ್ರ ಚಿಕಿತ್ಸೆಗೆ ತೆಗೆದುಕೊಂಡು ಬರೊಬ್ಬರಿ 2.3 ಕೆಜಿ ಗಡ್ಡೆಯನ್ನು ತೆಗೆದಿದ್ದಾರೆ. ಅದರ ಜೊತೆಗೆ ಇನ್ನೂಳಿದ ನಾಲ್ಕು ಜನ ಮಹಿಳೆಯರ ಕ್ಯಾನ್ಸರ್ ಗಡ್ಡೆ ಶಸ್ತ್ರಚಿಕಿತ್ಸೆ ಮಾಡಿ ಐದು ಜನ ಮಹಿಳೆಯರ ಜೀವ ಉಳಿಸಿದ್ದಾರೆ.

ಇನ್ನು ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆಗೆ ದಿನಂಪ್ರತಿ ನೂರಾರು ಜನ ಹೊರ ರೋಗಿಗಳು ಬರುತ್ತಾರೆ. ಇಲ್ಲಿ ಎಲ್ಲ ರೀತಿಯ ವೈದ್ಯರು ಇದ್ದಾರೆ. ಡಾ. ಶ್ರೀಧರ ದಂಡೆಪ್ಪನವರ ನೇತೃತ್ವದಲ್ಲಿ ಇಲ್ಲಿಯವರೆಗೆ ನೂರಾರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡಿ ಜೀವ ಉಳಿಸಿದ್ದಾರೆ. ಎಲ್ಲ ವೈದ್ಯರು, ಸ್ಟಾಪ್ ನರ್ಸ್ ಕೂಡ ಇವರಿಗೆ ಸಾಥ್ ನೀಡಿದ್ದಾರೆ.
