ಸಾಮನ್ಯವಾಗಿ ಹುಟ್ಟು ಹಬ್ಬದ ದಿನವಾಗಿ ಹಣ್ಣು ಹಂಪಲ ಹಂಚ್ಚುವುದು, ರೋಗಿಗಳಿಗೆ ಉಚಿತ ಚಿಕಿತ್ಸೆ ಕೊಡಿಸುವುದು ಸೇರಿ ವಿವಿಧ ರೀತಿಯ ದಾಸೋಹ ಮಾಡಿಸುವುದನ್ನು ನೋಡಿರ್ತೇವೆ. ಆದರೆ ಧಾರವಾಡ ಗೋ ರಕ್ಷನೊಬ್ಬ 100 ಜನ ಹೆಣ್ಮಕ್ಕಳಿಗೆ ದಿ ಕೇರಳ ಸ್ಟೋರಿ -2 ಚಿತ್ರದ ಟಿಕೆಟ್ ಕೊಟ್ಟು ಸೀನಿಮಾ ತೋರಿಸುವ ಮೂಲಕ ತನ್ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಣೆ ಮಾಡಿಕೊಂಡಿದ್ದಾನೆ.

ಧಾರವಾಡದ ಬಜರಂಗದಳದ ಕಾರ್ಯಕರ್ತ ಹಾಗೂ ಗೋ ರಕ್ಷನಾಗಿರುವ ಗಣೇಶ ರಾಥೋಡನೇ ಉಚಿತವಾಗಿ 100 ಜನ ಹೆಣ್ಮಕ್ಕಳಿಗೆ ದಿ ಕೇರಳ ಸ್ಟೋರಿ ಫಿಲ್ಮ್ ತೋರಿಸಿ ಕಾರ್ಯಕರ್ತನಾಗಿದ್ದಾನೆ. ಧಾರವಾಡದ ಐನಾಕ್ಸ್ ಮಾಲ್ ನಲ್ಲಿ ಉಚಿತ ಟಿಕೆಟ್ ವ್ಯವಸ್ಥೆ ಮಾಡಿ, ಸಿನಿಮಾ ನೋಡಲು ಬಂದ ಯುತಿಯರಿಗೆ ಖುದ್ದಾಗಿ 100 ಟಿಕೆಟ್ ವಿತರಿಸಿ ವಿಭಿನ್ನವಾಗಿ ತಮ್ಮ ಹುಟ್ಡು ಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ದಿ ಕೇರಳ ಸ್ಟೋರಿ -2 ಚಿತ್ರದಲ್ಲಿ ಲವ್ ಜಿಹಾದ್ ಕುರಿತಾಗಿದ್ದು, ಈಗ ಈ ಚಿತ್ರ ಕುರಿತು ಪರ ವಿರೋಧ ಚರ್ಚೆಗಳ ನಡೆಯುತ್ತವೆ. ಈ ಸಮಯದಲ್ಲಿ ಈ ಯುವಕ ಹೆಣ್ಮಕ್ಕಳಿಗೆ ಚಿತ್ರ ತೋರಿಸಿರುವುದನ್ನು. ಹಿಂದೂ ಸಂಘಟನೆಗಳು ಸ್ವಾಗತಿಸಿವೆ.
