Dharwad

ಧಾರವಾಡ ಶಹರ ಪೊಲೀಸರಿಂದ ಜನ ಮೆಚ್ಚುಗೆ ಕಾರ್ಯ…

Share

ಮನೆ ಮನೆಗೆ ಪೊಲೀಸ್ ಯೋಜನೆಯಡಿ ಒಂಟಿ ವೃದ್ಧರ ನಿವಾಸಕ್ಕೆ ಭೇಟಿ ನೀಡುವ ಮೂಲಕ ಧಾರವಾಡ ಶಹರ ಠಾಣೆಯ ಪೊಲೀಸರು, ವೃದ್ಧರ ಆರೋಗ್ಯ ವಿಚಾರಿಸಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆಯ ಜತೆಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ. ಶಹರ ಠಾಣೆಯ ಪೊಲೀಸರ ಈ ವಿನೂತನ ಕಾರ್ಯಕ್ಕೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.‌

ಜನ್ ಸ್ನೇಹಿ ಪೊಲೀಸ್ ವಾತಾವಾರ ನಿರ್ಮಿಸುವ ನಿಟ್ಟಿನಲ್ಲಿ ಮನೆ ಮನೆ ಪೊಲೀಸ್ ಯೋಜನೆಯನ್ನು ಪೊಲೀಸ್ ಇಲಾಖೆಯ ವತಿಯಿಂದ ನಡೆಸಲಾಗುತ್ತಿದ್ದು, ಈ ಯೋಜನೆಯಡಿಯಲ್ಲಿ ಧಾರವಾಡ ಶಹರ ಠಾಣೆಯ ಪೊಲೀಸರು ಒಂಟಿ ವೃದ್ಧರ ನಿವಾಸಕ್ಕೆ ಭೇಡಿ ನೀಡಿ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ನಗರದ ಮದರಮಡ್ಡಿ ಚಾವಣಿ ಓಣಿಯ ಎಂಬತ್ತು ವರ್ಷದ ಶಾಂತಮ್ಮ ಎಂ ಹಿರೇಮಠ ಹಿರಿಯ ವೃದ್ಧರ ನಿವಾಸಕ್ಕೆ ಪಿಎಸ್‌ಐ ವಿನೋದ ಆ್ಯಂಡ್ ಟೀಂ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಕೊಂಚ ಹೊತ್ತು ಅವರೊಂದಿಗೆ ಸಮಯ ಕಳೆದು ಕಾನೂನಿನ ಅರಿವು ಜೆತೆಗೆ ನೆರವಿನ ಕುರಿತು ಮಾಹಿತಿ ನೀಡಿದ್ದರು. ಅಷ್ಟೇ ಅಲ್ಲದೆ ಯಾವುದೇ ವಿಷಯಕ್ಕೂ ನೀವು ಭಯ ಪಡುವ ಅವಶ್ಯವಿಲ್ಲ, ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ. ನಿಮ್ಮಗೆ ಎಂತಹದೇ ವಿಷಯ ನೀವು ಹಂಚಿಕೊಳ್ಳವುದಿದ್ದಲ್ಲಿ ನಮ್ಮಗೆ ಕರೆ ಮಾಡಿ ಅಥವಾ ಬರಲು ತಿಳಿಸಿ ಎಂದು ಧೈರ್ಯ ಹೇಳಿದರು. ಇನ್ನೂ ಪೊಲೀಸರ ಈ ಕಾರ್ಯ ಜತೆಗೆ ಅವರ ವರ್ತನೆಗೆ ಎಂಬತ್ತು ವರ್ಷ ಅಜ್ಜಿಯೂ ಕೂಡಾ ಮೆಚ್ಚಿಕೊಂಡಿದ್ದಾರೆ. ಶಹರ ಠಾಣೆಯ ವಿನೂತನ ಕಾರ್ಯಕ್ಕೆ ಈಗ ಜನ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Tags:

error: Content is protected !!