Chikkodi

ಶ್ರೀವೀರಭದ್ರೇಶ್ವರರ ಭಕ್ತರು ಜಗತ್ತಿನಾದ್ಯಂತ:ಸಚಿವ ಈಶ್ವರ ಖಂಡ್ರೆ

Share

ಶ್ರೀವೀರಭದ್ರೇಶ್ವರ ಭಕ್ತರು ಜಗತ್ತಿನಾದ್ಯಂತ ಇದ್ದು,ಈ ದೇವರು ಜಾತ್ರೆಯು ಅತ್ಯಂತ,ಸಡಗರ,ಸಂಭ್ರಮ ವಿಜೃಂಭಣೆಯಿಂದ ನಡೆಯುತ್ತಿರುವುದು ಭಕ್ತಿಯ ಪರಾಕಾಷ್ಠೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನ ಶ್ರೀವೀರಭದ್ರೇಶ್ವರ ದೇವಸ್ಥಾನ ಗೋಪುರಗಳ ಲೋಕಾರ್ಪಣೆ,ಲಕ್ಷದ್ವೀಪೋತ್ಸವ ಹಾಗೂ ಕೃಷ್ಣಾರತಿ ಕಾರ್ಯಕ್ರಮ ಹಾಗೂ ಶ್ರೀವೀರಭದ್ರೇಶ್ವರ ದೇವಸ್ಥಾನ ಆವರಣದಲ್ಲಿ ನಿರ್ಮಾಣಗೊಂಡ ಥಿಮ್ ಪಾರ್ಕ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ ಶ್ರೀಶೈಲ್ ಜಗದ್ಗುರುಗಳ ಪಾದಸ್ಪರ್ಶದಿಂದ ಯಡೂರ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ‌.ವೀರಶೈವ ಸಮಾಜದ ಮೂಲ ದೇವರು ವೀರಭದ್ರೇಶ್ವರ.ಎಲ್ಲಿ ವೀರಭದ್ರೇಶ್ವರ ದೇವಸ್ಥಾನ ಇರುತ್ತೆ ಅಲ್ಲಿ ವೀರಶೈವ ಸಮಾಜ ಜನರು ದೊಡ್ಡ ಪ್ರಮಾಣದಲ್ಲಿ ಇರುತ್ತಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಶ್ರೀಶೈಲ್ ಜಗದ್ಗುರು ಡಾ! ಚನ್ನಸಿಧ್ದರಾಮ ಪಂಡಿತಾರಾಧ್ಯ ಶ್ರೀಗಳಿಂದ ಕಳೆದ 20 ವರ್ಷಗಳಿಂದ ಯಡೂರ ಕ್ಷೇತ್ರದಲ್ಲಿ ಕಲ್ಯಾಣ ಭವನ,ಯಾತ್ರಿ ನಿವಾಸ ಸೇರಿದಂತೆ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳು ಮಾಡಿರುವುದು ಪ್ರಶಂಸನೀಯ‌.ಶ್ರೀಮಠ ದೇವಸ್ಥಾನದ ಮೂಲಕ ಶಿಕ್ಷಣ ನೀಡುವ ‌ಕೆಲಸವಾಗಲಿ ಎಂದರು.

ಈ ಸಂದರ್ಭದಲ್ಲಿ ಶ್ರೀಶೈಲ್ ಜದ್ಗುರುಗಳು,ಕಾಶೀ ಜದ್ಗರುಗಳು,ಎಂಎಲ್ಸಿ ಪ್ರಕಾಶ ಹುಕ್ಕೇರಿ, ಶಾಸಕಿ ಶಶಿಕಲಾ ಜೊಲ್ಲೆ,ಶಾಸಕರಾದ ದುರ್ಯೋಧನ ಐಹೊಳೆ, ಗಣೇಶ ಕತ್ತಿ,ನಿಖಿಲ ಕತ್ತಿ,ಸಿದ್ದು ಸವದಿ,ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ,ಚಿಕ್ಕೋಡಿ ಪುರಸಭೆಯ ಹಿರಿಯ ಸದಸ್ಯ ಜಗದೀಶ ಕವಟಗಿಮಠ ಸೇರಿದಂತೆ ವಿವಿಧ ‌ಮಠಾಧೀಶರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:

error: Content is protected !!