BELAGAVI

ಗೋವಾ ದಾಮೋದರ ದೇವಸ್ಥಾನಕ್ಕೆ ಬರುವ ವೃದ್ಧರು, ದಿವ್ಯಾಂಗರಿಗೆ ಬೆಳಗಾವಿಯ ಭಕ್ತರಿಂದ ವೀಲ್-ಚೇರ್ ಕೊಡುಗೆ!

Share

ಗೋವಾದ ಝಾಂಬೋಲಿಮ್‌ನಲ್ಲಿರುವ ಶ್ರೀ ದಾಮೋದರ ದೇವಸ್ಥಾನಕ್ಕೆ ಆಗಮಿಸುವ ಹಿರಿಯ ನಾಗರಿಕರು ಹಾಗೂ ದಿವ್ಯಾಂಗ ಭಕ್ತರ ಅನುಕೂಲಕ್ಕಾಗಿ ಬೆಳಗಾವಿಯ ಗೋಂಧಳಿ ಗಲ್ಲಿಯ ಶ್ರೀ ದಾಮೋದರ ದೇವಸ್ಥಾನದ ಭಕ್ತರು ವಿಶೇಷ ನೆರವು ನೀಡಿದ್ದಾರೆ.

ಗೋವಾದ ಝಾಂಬೋಲಿಮ್’ನ ಶ್ರೀ ದಾಮೋದರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆಯಲು ವೃದ್ಧರು ಮತ್ತು ದಿವ್ಯಾಂಗರಿಗೆ ಸಹಕಾರವಾಗುವಂತೆ ಬೆಳಗಾವಿಯ ಗೋಂಧಳಿ ಗಲ್ಲಿಯಲ್ಲಿರುವ ಶ್ರೀ ದಾಮೋದರ ದೇವಸ್ಥಾನದ ಭಕ್ತರು ಬಬನ ಬೋಭೆ ಮತ್ತು ಡಾ. ಸಂತೋಷ್ ಭೋಬೆ ಅವರು ತಮ್ಮ ದಿವಂಗತ ತಂದೆ ತಾಯಿಗಳಾದ ಜಯಶ್ರೀ ಮತ್ತು ನರಹರಿ ಭೋಗೆ ಅವರ ವೀಲ್ಹ್ ಚೇರ್’ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ವೇಳೆ ಗೋವಾದ ಗೋದವಾನಿ, ಸತೀಶ್ ಸಾಖರದಾಂಡೆ, ಸಂತೋಷ ಪುರೋಹಿತ, ಸುನೀತಾ ಹೆಗಡೆ, ಅನುರಾಧಾ ಅವಧಿ, ಮಂಜುನಾಥ ಢಕಳೆ ಇನ್ನುಳಿದವರು ಉಪಸ್ಥಿತರಿದ್ಧರು.

Tags:

error: Content is protected !!