BELAGAVI

ಇರಾನ್ ನಾಯಕನ ಭಾವಚಿತ್ರ ತೆರವಿಗೆ ಆಗ್ರಹ…ಡಾ. ಅಂಬೇಡ್ಕರ್’ರ ಅವಮಾನದ ವಿರುದ್ಧ ಪ್ರಮೋದ್ ಮುತಾಲಿಕ್ ಕಿಡಿ

Share

ಇರಾನ್ – ಭಾರತದ ನಡುವೆ ಯುದ್ಧ ಆರಂಭವಾದರೆ ಮುಸ್ಲಿಮರು ಯಾರ ಪರ ನಿಲ್ಲುತ್ತಾರೆ ಎನ್ನುವ ಸ್ಪಷ್ಟ ಸಂದೇಶವನ್ನು ರವಾನಿಸುತ್ತಿದ್ದಾರೆ. ಖಮೇನಿ ಭಾವಚಿತ್ರ ಅಳವಡಿಸಿರುವುದನ್ನು ತೆರವುಗೊಳಿಸಬೇಕು ಎಂದು ಶ್ರೀರಾಮ್ ಸೇನಾ ಸಂಸ್ಥಾಪಕ, ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಪೊಲೀಸರು ಅಫಜಲ್ ಖಾನ್ ಹಾಗೂ ಶಾಹೀದ್ ಶಿಖಾನ್ ಫೋಟೋ ಅಳವಡಿಸಲು ಪೊಲೀಸರು ವಿರೋಧ ವ್ಯಕ್ತಪಡಿಸಿದ್ದಾರೆ. ಇದೊಂದು ಕಾಂಗ್ರೆಸ್ ಆಡಳಿತಲ್ಲಿ ಪೊಲೀಸರು ಅತಿಯಾದ ವರ್ತನೆ ಮಾಡುತ್ತಿದೆ ಎಂದರು.
ಭಾನು ಮುಸ್ತಾಕ್ ಚಪ್ಪಲಿ ಧರಿಸಿಕೊಂಡೇ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿರುವುದು ಅಸಭ್ಯ ಮತ್ತು ಅವಮಾನಕರ ನಡೆ ಎಂದು ಕಿಡಿಕಾರಿದರು.

ಚಪ್ಪಲಿ ತೆಗೆದು ನಮನ ಸಲ್ಲಿಸಿ ಎಂದು ಕೆಲವರು ಹೇಳಿದಾಗ “ಚಪ್ಪಲಿ ನಮ್ಮ ಮನೆ ದೇವರು” ಎಂದು ಹೇಳಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಮುತಾಲಿಕ್ ಆರೋಪಿಸಿದರು.
“ಚಪ್ಪಲಿ ನಿಮ್ಮ ಮನೆಯ ದೇವರಾಗಿದ್ದರೆ ಅದನ್ನು ಕೊರಳಿಗೆ, ತಲೆಗೆ ಅಥವಾ ದರ್ಗಾದ ಮೇಲೂ ಹಾಕಿಕೊಳ್ಳಿ. ಇದು ದಲಿತ ಸಮುದಾಯಕ್ಕೂ, ಅಂಬೇಡ್ಕರ್ ಅವರಿಗೆ ಮಾತ್ರ ಮಾಡಿದ ಅವಮಾನವಲ್ಲ; ಇಡೀ ಹಿಂದೂ ಸಮಾಜಕ್ಕೆ ಮಾಡಿದ ಅವಮಾನ,” ಎಂದು ಮುತಾಲಿಕ್ ತೀವ್ರವಾಗಿ ಪ್ರತಿಕ್ರಿಯಿಸಿದರು.

ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಕಾಂಗ್ರೆಸ್ ಸರ್ಕಾರ ಅವಕಾಶ ನೀಡಿರುವುದರಿಂದಲೇ ಇಂತಹ ಧೈರ್ಯ ಬಂದಿದೆ ಎಂದು ಆರೋಪಿಸಿದ ಅವರು, ಬಾನು ಮುಷ್ತಾಕ್ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಕ್ಷಮೆ ಕೇಳದಿದ್ದರೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ದಾವಣಗೆರೆ ಉಪಚುನಾವಣೆಯಲ್ಲಿ ಮುಸ್ಲಿಮ್ ಸಮಾಜಕ್ಕೆ ಯಾವುದೇ ಟಿಕೆಟ್ ಕೊಡಬಾರದು. ಒಂದು ವೇಳೆ ನೀಡಿದರೆ ಶ್ರೀರಾಮ್ ಸೇನೆ ಬಂದು ಸೋಲಿಸುತ್ತದೆ ಎಂದರು.

Tags:

error: Content is protected !!