ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗಬೇಕು ಮತ್ತು ಅವರ ಧ್ವನಿ ಗಟ್ಟಿಯಾಗಬೇಕು. ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಶಿಕ್ಷಣವೇ ಮೂಲ ಅಡಿಪಾಯ’ ಎಂದು ರಾಹುಲ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟರು.


ಬೆಳಗಾವಿಯ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣದ ವತಿಯಿಂದ ಮಹಿಳಾ ಜಾಗೃತಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಶ್ರೀ ಬಸವಮೂರ್ತಿ ಸ್ವಾಮಿಜೀ ಮತ್ತು ಶ್ರೀ ಬ್ರಹ್ಮಾನಂದ ಅಜ್ಜನವರ ಸಾನಿಧ್ಯದಲ್ಲಿ ಮತ್ತು ಸಂಘಟನೆಯ ಕಾರ್ಯಾಧ್ಯಕ್ಷೆ ಬಾಳವ್ವ ಹರಿಜನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ರಾಹುಲ್ ಜಾರಕಿಹೊಳಿ ಅವರು ಉಪಸ್ಥಿತರಿದ್ಧರು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು ಕುಟುಂಬದ ನಿರ್ವಹಣೆ ಮತ್ತು ಆರ್ಥಿಕ ಮಟ್ಟವನ್ನು ಕಾಪಾಡುವಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ ಎಂದರು.
ಈ ವೇಳೆ ಮಾತನಾಡಿದ ರಾಹುಲ್ ಜಾರಕಿಹೊಳಿ ಅವರು, ಮಹಿಳೆಯರಿಗೆ ಸಮಾನವಾದ ಅವಕಾಶಗಳು ಸಿಗಬೇಕು. ಅವರ ಧ್ವನಿ ಇನ್ನಷ್ಟು ಎತ್ತರಕ್ಕೆ ಗಟ್ಟಿಯಾಗಿ ಬೆಳೆಯಬೇಕು. ಗ್ರಾಮೀಣಮಟ್ಟದಲ್ಲಿನ ಮಹಿಳೆಯರು ಸಬಲೀಕರಣವಾಗಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕು. ಬಾಬಾಸಾಹೇಬರು ಸಂವಿಧಾನದಲ್ಲಿ ನೀಡಿದ ಸಮಾನ ಹಕ್ಕುಗಳಿಂದಲೇ ಭಾರತ ದೇಶ ಇಂದು ವಿಶ್ವಮಟ್ಟದಲ್ಲಿ ಮಾನ್ಯತೆಯನ್ನು ಪಡೆದಿದೆ. ಆರ್ಥಿಕವಾಗಿ ಮತ್ತು ಸಾಮಾಜೀಕವಾಗಿ ಬೆಳೆಯಬೇಕಾದರೇ, ಶಿಕ್ಷಣವೇ ಮೂಲ ಅಡಿಪಾಯ ಎಂದರು.
ಈ ವೇಳೆ ಆಶಾ ಐಹೊಳೆ, ಎಚ್.ಕೊಟ್ರೆಮ್ಮ, ಸುನೀತಾ ಐಹೊಳೆ, ಕಮಲವ್ವ ಕರೆಮ್ಮನವರ, ಲಕ್ಷ್ಮೀ ನಾಗಣ್ಣವರ, ಮಾಲಾ ತುರಿಹಾಳ, ಪಾರ್ವತಿ ಆಡೂರ, ಶರಣಮ್ಮ ಪೂಜಾರ್, ಸುನೀತಾ ಮೋದಗಿ, ವಿರುಪಮಾ ದೊಡಮನಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
