ಸಮಾಜ ಸೇವೆಯೇ ಮುಖ್ಯವಾಗಿರುವ ಕಾಯಕದಲ್ಲಿ ತೊಡಗಿಕೊಂಡರೆ ಸಾಕಷ್ಟು ನೆಮ್ಮದಿ ಸಿಗಲು ಸಾಧ್ಯ. ಅದರಲ್ಲಿಯೂ ಮುಖ್ಯವಾಗಿ ಅಂಗವಿಕಲರು ಹಾಗೂ ಸಮಾಜದ ಮುಖ್ಯವಾಹಿನಿಯಲ್ಲಿ ಬದಕಲು ಕಷ್ಟಪಡುತ್ತಿರುವವರಿಗೆ ಸ್ಪಂಧಿಸಬೇಕಾಗಿದೆ. ಅವರ ಕುಟುಂಭಗಳು ಆರ್ಥಿಕವಾಗಿ ಹಿಂದುಳಿದಿದ್ದರೆ ಅವರ ಆರೈಕೆ ಬಹಳ ಕಷ್ಟಕರ. ಆದ್ದರಿಂದ ಅಂಗವಿಕಲರ ಸೇವೆಯಲ್ಲಿ ಸಮಾಜ ತೊಡಗಿ ಅವರ ಸಬಲತೆಗೆ ಕೈಜೋಡಿಸಬೇಕೆಂದು ಯುವ ಧುರೀಣರಾದ ವಿಕ್ರಮ ಇನಾಮದಾರ ಅವರಿಂದಿಲ್ಲಿ ಹೇಳಿದರು.


ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಶ್ರೀ ಡಿ ಬಿ ಇನಾಮದಾರ ಫೌಂಡೇಶನ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಹಾಗೂ ‘ALIMCO’ ( ಭಾರತೀಯ ಕೃತಕ ಅಂಗಗಳ ಉತ್ಪಾದನಾ ನಿಗಮ) ಇವುಗಳ ಸಂಯುಕ್ತಾಶ್ರದಲ್ಲಿ ಅಂಗವಿಕಲರಿಗೆ ತ್ರಿಚಕ್ರ ವಾಹನ ಹಾಗೂ ಜೀವನಾಧಾರಕ್ಕೆ ಅವಶ್ಯವಿರುವ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ತಂದೆ ಡಿ ಬಿ ಇನಾಮಾದಾರ ಅವರ ಮನಸ್ಸಿನಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ. ಅವರ ಹೆಸರಿನಲ್ಲಿಯೇ ಪ್ರತಿಷ್ಠಾನ ಸ್ಥಾಪಿಸಿ ಸೇವೇಗೈಯುತ್ತಿದ್ದೇವೆ. ಈ ಭಾಗದಲ್ಲಿ ಅಂಗವಿಕಲತೆಯಿಂದ ಬಳಲುತ್ತಿರುವವರನ್ನು ಗುರುತಿಸಿ ಅವರಿಗೆ ಅವಶ್ಯವಿರುವ ಕಾಳಜಿ ವಹಿಸುವದರೊಂದಿಗೆ ಅವರ ಅಗತ್ಯಗಳನ್ನು ಪೂರೈಸಲು ಡಿ ಬಿ ಇನಾಮದಾರ ಫೌಂಡೇಶನ ಸದಾ ಒಂದು ಹೆಜ್ಜೆ ಮುಂದಿರುತ್ತದೆ. ಆದ್ದರಿಂದ ಯಾರೇ ಕೂಡ ಅಂಗವಿಕಲತೆಯಿಂದ ಬಳಲುತ್ತಿದ್ದರೆ ನಮ್ಮ ಗಮನಕ್ಕೆ ತೆಗೆದುಕೊಂಡು ಬರಬೇಕೆಂದು ಕೋರಿದರು.
ಪೌಂಡೇಶನ್‌ನ ಶ್ರೀಮತಿ ಲಕ್ಷ್ಮಿ ಇನಾಮದಾರ ಅವರು ಮಾತನಾಡಿ, ಸಮಾಜ ಸೇವೆಯನ್ನೇ ಮುಖ್ಯವಾಗಿಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಮುಖ್ಯವಾಗಿ ಈ ಭಾಗದಲ್ಲಿ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಕುರಿತು ಜಾಗೃತಿ ಕಡಿಮೆ ಇದೆ. ಆದ್ದರಿಂದ ಸರಕಾರ ಹಾಗೂ ಸರಕಾರೇಥರ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಸಿಗುವ ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತದೆ.ಅಲ್ಲದೇ ಮಹಿಳೆಯರ ಆರೋಗ್ಯ ಕಾಳಜಿಗೂ ಕೂಡ ಹೆಚ್ಚಿನ ಒತ್ತು ನೀಡಲಾಗುತ್ತದೆ. ಮುಂಬರುವ ದಿನಗಳಲ್ಲಿ ಮಹಿಳೆಯರಿಗೆ ಅವಶ್ಯವಿರುವ ರೋಗನಿರೂಧಕ ಹಾಗೂ ರೋಗ ತಡೆಗಟ್ಟುವ ವ್ಯಾಕ್ಸಿನೇಶನ ಹಾಕಿಸಲು ಕ್ರಮವಹಿಸಲಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಮಹಾಂತೇಶ ಪಾಶ್ಚಾಪೂರ, ಮಡಿವಾಳಪ್ಪ ವನ್ನೂರ, ಬಿ ಟಿ ಖಂಡಪ್ಪನವರ, ಪುಂಡಲೀಕ ಹಾರುಗೊಪ್ಪ , ಈರಣ್ಣ ವನ್ನೂರ, ಪ್ರವೀಣ ಕೆಸರಕೊಪ್ಪ, ವಿಜಯ ಮೆಳವಂಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
