Accident

ಶ್ರೀಶೈಲದಿಂದ ವಾಪಸ್ ಬರುವಾಗ ಕ್ರೂಸರ್ ಅಪಘಾತ: ಚಿಕ್ಕೋಡಿ ಮೂಲದ ಮೂವರು ಸಾವು

Share

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ದರ್ಶನ ಪಡೆದುಕೊಂಡು ಮರಳಿ ಬರುವ ವೇಳೆ ಕ್ರೂಸರ್ ವಾಹನ ಹಾಗೂ ಲಾರಿ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಚಿಕ್ಕೋಡಿ ಮೂಲದ ಮೂವರು ಮೃತಪಟ್ಟ ಘಟನೆ ಆಂದ್ರಪ್ರದೇಶದ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಬಳಿ ಸೋಮವಾರ ಸಂಭವಿಸಿದೆ.

ಚಿಕ್ಕೋಡಿ ತಾಲೂಕಿನ ಎಕ್ಸಂಬಾ ಪಟ್ಟಣದ ಅಜಿತ್‌ ಸಾತವಾರ (28), ಗೌರವ್ (40) ಹಾಗೂ ಅಲಕಾ ಶಿಂಧೆ (60) ಮೃತಪಟ್ಟ ದುರ್ದೈವಿಗಳು. ಶ್ರೀಶೈಲ ಮಲ್ಲಿಕಾರ್ಜುನ ದರ್ಶನಕ್ಕೆ 14 ಜನ ಕ್ರೂಸರ್ ವಾಹನದಲ್ಲಿ ತೆರಳಿದ್ದರು.

ದೇವರ ದರ್ಶನ ಪಡೆದುಕೊಂಡು ಮರಳುವ ವೇಳೆ ಮಾರ್ಕಪುರಂ ಜಿಲ್ಲೆಯ ತಿಪ್ಪಾಯಪಾಲೆಂ ಬಳಿ ಕರ್ನೂಲ್‌ನಿಂದ ನಲ್ಗೊಂಡಕ್ಕೆ ಹಸಿ ಬಾಳೆಹಣ್ಣು ಸಾಗಿಸುತ್ತಿದ್ದ ಲಾರಿ ಕ್ರೂಸರ್ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ಸಂಭವಿಸಿದೆ.

ಘಟನೆಯಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ನಂದ್ಯಾಲ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾರ್ಕಪುರಂನ ವೃತ್ತ ನಿರೀಕ್ಷಕ ಪಿ. ಸುಬ್ಬಾರಾವ್ ಮಾಹಿತಿ ನೀಡಿದ್ದಾರೆ.

Tags:

error: Content is protected !!