ಮ್ಯಾಗ್ನೆಟ್ ಶಾಲೆಗಳ ಹೆಸರಿನಲ್ಲಿ ಸರಕಾರಿ ಪ್ರಾಥಮಿಕ
ಶಾಲೆಗಳನ್ನು ಮುಚ್ಚುವ ರಾಜ್ಯ ಸರಕಾರದ ನೀತಿಯನ್ನು
ವಿರೋಧಿಸಿ ರಾಜ್ಯದಾದ್ಯಂತ ನಡೆದಿರುವ ಆಂದೋಲನವನ್ನು
ಬೆಂಬಲಿಸಿ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ
ಧರಣಿ ಸತ್ಯಾಗ್ರಹ, ಮೋರ್ಚಾ ನಡೆಸಲು ರವಿವಾರ
ಮುಂಜಾನೆ ಬೆಳಗಾವಿಯ ನಿರೀಕ್ಷಿಣಾ ಮಂದಿರದಲ್ಲಿ
ಸಭೆ ಸೇರಿದ್ದ ಸಮಾನ ಮನಸ್ಕರು ಕನ್ನಡ ಸಂಘಟನೆಗಳ
ಸಭೆಯಲ್ಲಿ ತೀರ್ಮಾನಿಸಲಾಯಿತು.


ಹೊಸ ನೀತಿಯ ಪರಿಣಾಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಮುಚ್ಚಲಿರುವ ಕನ್ನಡ ಶಾಲೆಗಳ ವಿವರಗಳನ್ನು
ಸಭೆಯಲ್ಲಿ ವಿವರಿಸಿದ ಹಿರಿಯ ಕನ್ನಡ ಹೋರಾಟಗಾರ
ಅಶೋಕ ಚಂದರಗಿ ಅವರು, ತಾವು ಕಳೆದ ಡಿಸೇಂಬರ್
30 ರಂದು ಬೆಂಗಳೂರಿನಲ್ಲಿ ಮುಖ್ಯ ಕಾರ್ಯದರ್ಶಿ
ಶ್ರೀಮತಿ ಶಾಲಿನಿ ರಜನಿಶ ಅವರಿಗೆ ಈ ಸಂಬಂಧ ಸಲ್ಲಿಸಿದ ಮನವಿಯ ಬಗ್ಗೆ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ
ಹಿರಿಯ ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಇತ್ತೀಚಿಗೆ ಫೆಬ್ರುವರಿ 20 ರಂದು ಗಡಿ ಉಸ್ತುವಾರಿ ಸಚಿವ ಶ್ರೀ ಎಚ್. ಕೆ.
ಪಾಟೀಲ್ ಅವರಿಗೆ ಈ ಬಗ್ಗೆ ಮನವಿ ಸಲ್ಲಿಸಲಾಗಿದೆ
ಬಗ್ಗೆ ಸಮಗ್ರವಾದ ಮನವಿ ಸಲ್ಲಿಸಿದ್ದಾಗಿ ಹೇಳಿದರು.
ನಾಡು, ನುಡಿ, ಗಡಿಯ ಹಿತಾಶಕ್ತಿಗೆ ಸಂಬಂಧಿಸಿದ
ಅನೇಕ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯೋತ್ಸವ ಆಚರಣೆಗಾಗಿ ರಾಜ್ಯ ಸರಕಾರ ಬಿಡುಗಡೆ
ಮಾಡಿದ್ದ 50 ಲ. ರೂ. ಅನುದಾನದ ದುರ್ಬಳಕೆಯ
ಸಂಬಂಧ ಅನೇಕರು ಸಭೆಯಲ್ಲಿ ಪ್ರಸ್ತಾಪಿಸಿದರು. ಕನ್ನಡ ಸಂಘಟನೆಗಳಿಗೆ ಇದಕ್ಕಿಂತಲೂ ಮುಖ್ಯವಾದ ವಿಷಯಗಳಿದ್ದು ಸದ್ಯ ಈ ಬಗ್ಗೆ ಚರ್ಚಿಸುವದೇ ಬೇಡ ಎಂದು
ಅನೇಕ ಮುಖಂಡರು ಸಲಹೆ ನೀಡಿದರು.
ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ
ಮಹಾದೇವ ತಳವಾರ ಅವರು ಮಾತನಾಡಿ, ಕಳೆದ ವರ್ಷದ ಅಕ್ಟೊಬರ್ ತಿಂಗಳಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಜಿಲ್ಲಾ ಮಟ್ಟದ ಮತ್ತು ಪಾಲಿಕೆ ಮಟ್ಟದ ಕನ್ನಡ ಅನುಷ್ಠಾನ
ಸಮಿತಿಗಳನ್ನು ರಚಿಸಿದ್ದರೂ ಸಹ ಇವರೆಗೂ ಸಭೆಯನ್ನು
ಕರೆಯಲಾಗಿಲ್ಲ ಎಂದು ಆಕ್ಷೇಪಿಸಿದರು. ಈ ಬಗ್ಗೆ ತಾವು ಎರಡು ಬಾರಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಡಾ. ಬಿಳಿಮಲೆ ಪುರುಷೋತ್ತಮ ಅವರನ್ನು ಭೆಟ್ಟಿಯಾಗಿ
ಚರ್ಚಿಸಿದ್ದಾಗಿ ಅಶೋಕ ಚಂದರಗಿ ತಿಳಿಸಿದರು.
ಬೆಳಗಾವಿ ಗಡಿ ಭಾಗದ ವಿವಿಧ ಸಮಸ್ಯೆಗಳ ಬಗ್ಗೆ ರಾಜ್ಯ ಸರಕಾರದ ಗಮನ ಸೆಳೆಯಲು ರಾಜ್ಯ ವಿಧಾನ
ಮಂಡಲದ ಬಜೆಟ್ ಅಧಿವೇಶನದ ನಂತರ ಬೆಂಗಳೂರಿಗೆ
ನಿಯೋಗ ಒಯ್ಯಲು ಸಭೆಯಲ್ಲಿ ಹೋರಾಟಗಾರರು
ಸೂಚಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ )
ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಧ್ಯಕ್ಷ ಬಲರಾಮ ಮಾಸೇನಟ್ಟಿ , ಸರ್ವೋದಯ ಸ್ವಯಂ
ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಚ್ಚರೆಡ್ಡಿ, ಕನ್ನಡ ಹೋರಾಟಗಾರರಾದ ಶಂಕರ
ಬಾಗೇವಾಡಿ, ಮೈನೋದ್ದಿನ ಮಕಾನದಾರ, ಮಲ್ಲಪ್ಪ
ಗುಡಗನಟ್ಟಿ, ಪ್ರೇಮ ಚೌಗುಲಾ, ಪ್ರಭು ಕಾಕತಿಕರ,
ಸಣ್ಣತಮ್ಮ ಮೂಕನವರ, ಆನಂದ ದಿಲಾವರ, ಸಂತೋಷ
ಮಾಸೇನಟ್ಟಿ ಮುಂತಾದವರು ಭಾಗವಹಿಸಿದ್ದರು.
