ಈ ಯುದ್ಧ ಅಗತ್ಯ ಇರಲಿಲ್ಲ. ಅಮೆರಿಕ ಅಧ್ಯಕ್ಷ ಟ್ರಂಪ್ ದ್ವಂದ್ವ ನೀತಿ ಅನುಸರಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಇರಾನ್ ಮೇಲೆ ಇಸ್ರೇಲ್-ಅಮೆರಿಕದಿಂದ ಜಂಟಿ ದಾಳಿ ವಿಚಾರವಾಗಿ ಶಿವಮೊಗ್ಗ ಏರ್ಪೋರ್ಟ್ನಲ್ಲಿ ಮಾತನಾಡಿದ ಅವರು, ಒಂದೆಡೆ ಶಾಂತಿ ಮಂತ್ರ ಮತ್ತೊಂದೆಡೆ ಯುದ್ಧ ಮಾಡುತ್ತಿದ್ದಾರೆ. ದಾಳಿ ವೇಳೆ ಇರಾನ್ ಪರಮೋಚ್ಛ ನಾಯಕ ಖಮನೈ ಹತ್ಯೆಗೀಡಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಖಮೇನಿ ಹತ್ಯೆ ಮಾಡಿದ್ದು ಖಂಡನೀಯ ಎಂದಿದ್ದಾರೆ.
ಇನ್ನು ಯುದ್ಧ ಆರಂಭವಾದ ಮೇಲೆ ಕನ್ನಡಿಗರು ಸಿಲುಕಿಕೊಂಡಿದ್ದಾರೆ, ಅವರ ರಕ್ಷಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮಕೈಗೊಂಡಿದೆ. ಭೋಜೆಗೌಡ ಅವರು ಕೂಡ ದುಬೈನಲ್ಲಿಯೇ ಇದ್ದು, ಸದ್ಯದ ಪರಿಸ್ಥಿತಿಯಲ್ಲಿ ಏರಪೋರ್ಟ್ ಬಂದ್ ಮಾಡಲಾಗಿದೆ. ವಿಮಾನಸೇವೆ ಆರಂಭವಾಗುತ್ತಲೇ, ಕನ್ನಡಗಿರನ್ನು ಸುರಕ್ಷಿತವಾಗಿ ಕರೆ ತರಲಾಗುವುದು. ನಾವು ನಿರಂತರವಾಗಿ ವಿದೇಶಾಂಗ ಸಚಿವರ ಸಂಪರ್ಕದಲ್ಲಿದ್ದೇವೆ ಎಂದರು.
