Chikkodi

ಗೋಮಟೇಶ ಶಿಕ್ಷಣ ಸಂಸ್ಥೆಯಲ್ಲಿ ವಿಜ್ಞಾನ ಮಹಾವಿದ್ಯಾಲಯಕ್ಕೆ ಅನುಮತಿ:ಡಾ! ಎನ್ ಎ ಮಗದುಮ್ಮ

Share

• ಗೋಮಟೇಶ ಸಂಸ್ಥೆಯಿಂದ ಹೊಸ ವಿಜ್ಞಾನ ಕಾಲೇಜು.
• 50 ಅರ್ಹ ವಿದ್ಯಾರ್ಥಿಗಳಿಗೆ ಬೃಹತ್ ವಿದ್ಯಾರ್ಥಿವೇತನ.
• ನೀಟ್, ಜೆಇಇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.
• ಎಪ್ರಿಲ್ 4ರ ಒಳಗೆ ನೋಂದಣಿಗೆ ಅವಕಾಶ.

ಚಿಕ್ಕೋಡಿ : ಅಂಕಲಿ ಗೋಮಟೇಶ ಶಿಕ್ಷಣ ಸಂಸ್ಥೆಯು 2026-27ನೇ ಶೈಕ್ಷಣಿಕ ವರ್ಷದಿಂದ ಡಾ.ಎನ್.ಎ.ಮಗದುಮ್ಮ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯಕ್ಕೆ ಅನುಮತಿ ನೀಡಿದೆ ಎಂದು ಸಂಸ್ಥೆಯ ಸಂಸ್ಥಾಪಕ ಡಾ.ಎನ್‌.ಎ. ಮಗುದುಮ ಹೇಳಿದರು.

ಅಂಕಲಿ ಗ್ರಾಮದಲ್ಲಿ ಡಾ.ಎನ್.ಎ. ಮಗದುಮ್ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶೈಕ್ಷಣಿಕ ವರ್ಷದಿಂದಲೇ ಪ್ರವೇಶ ಆರಂಭವಾಗಲಿದೆ ಎಂದರು.

ಸಂಸ್ಥೆಯಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಪರೀಕ್ಷೆ ನಡೆಸಲಾಗುವುದು. ಈ ಬಾರಿ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು. ಒಂದರಿಂದ ಹತ್ತನೇ ರ್ಯಾಂಕ್ ಪಡೆಯುವ ಪ್ರತಿ ವಿದ್ಯಾರ್ಥಿಗೆ 70,000 ರೂ. ವಿದ್ಯಾರ್ಥಿವೇತನ, 11ರಿಂದ ಇಪ್ಪತ್ತನೇ ರ್ಬ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ 60,000 ರೂ. ವಿದ್ಯಾರ್ಥಿವೇತನ ಮತ್ತು 21 ರಿಂದ 50 ರಾಂ ಕ್ ಪಡೆಯುವ ವಿದ್ಯಾರ್ಥಿಗಳಿಗೆ 50,000 ರೂ. ವಿದ್ಯಾರ್ಥಿವೇತನ ನೀಡಲಾಗುವುದು ಎಂದು ತಿಳಿಸಿದರು.

ಪರೀಕ್ಷೆಗೆ ಏ.5 ಕೊನೆಯ ದಿನವಾಗಿದ್ದು 4ರೊಳಗೆ ನೋಂದಣಿ ಮಾಡಿಕೊಳ್ಳಬೇಕು. ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವಸತಿ ರಹಿತ ಮತ್ತು ವಸತಿ ಸೌಲಭ್ಯ ಒದಗಿಸಲಾಗುವುದು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಿರುವ ನೀಟ್ ಮತ್ತು ಇತರ ಜೆಇಇಕೆ, ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಗಡಿ ಪ್ರದೇಶದ ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳ ವಿದ್ಯಾರ್ಥಿಗಳು ಈ ಶೈಕ್ಷಣಿಕ ಸೌಲಭ್ಯದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.

ಸಂಸ್ಥೆಯ ಉಪಾಧ್ಯಕ್ಷ ಡಾ.ಹರ್ಷವರ್ಧನ್ ಮಗದುಮ, ಪ್ರಾಚಾರ್ಯ ಎನ್.ಸಾಗರ್, ಸಿಬಿಎಸ್‌ಸಿ ಪ್ರಾಚಾರ್ಯ ಎಂ.ಎಸ್. ನಿಡುಗುಂದಿ, ಶುಶ್ರೂಷ ಮಹಾವಿದ್ಯಾಲಯ ಪ್ರಾಚಾರ್ಯ ಹಜರತಅಲಿ ಪನಾರಿ, ಪಾಚಾರ್ಯ ಸುರೇಶ್ ಎನ್. ಉಪಸ್ಥಿತರಿದ್ದರು.

Tags:

error: Content is protected !!