Vijaypura

153 ಪೊಲೀಸರಿಗೆ ಮುಖ್ಯಮಂತ್ರಿ ಪದಕ ಘೋಷಣೆ; ವಿಜಯಪುರ ಜಿಲ್ಲೆಯಿಂದ 5 ಪೋಲಿಸ್ ಸಿಬ್ಬಂದಿಗಳಿಗೆ ಗೌರವ…

Share

ಕರ್ನಾಟಕ ಸರ್ಕಾರವು 2025ನೇ ಸಾಲಿನ ಮುಖ್ಯಮಂತ್ರಿ ಪದಕ ಕ್ಕೆ ಒಟ್ಟು 153 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಆಯ್ಕೆ ಮಾಡಿದ್ದು, ವಿಜಯಪುರ ಜಿಲ್ಲೆಯಿಂದ ಐದು ಮಂದಿ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಪೊಲೀಸ್ ಇಲಾಖೆಯಲ್ಲಿ ಅವರ ವಿಶಿಷ್ಟ ಸೇವೆ, ಕರ್ತವ್ಯನಿಷ್ಠೆ ಹಾಗೂ ಅನುಕರಣೀಯ ಕಾರ್ಯಕ್ಷಮತೆಯನ್ನು ಗುರುತಿಸಿ ಈ ಪದಕವನ್ನು ಘೋಷಿಸಲಾಗಿದೆ.
ವಿಜಯಪುರ ಜಿಲ್ಲೆಯಿಂದ ಆಯ್ಕೆಯಾದವರು:
ತುಳಜಪ್ಪ ಸುಲ್ಪಿ – ಡಿ.ಎಸ್.ಪಿ, ವಿಜಯಪುರ ಗ್ರಾಮೀಣ ಉಪವಿಭಾಗ
ಬಾಳಪ್ಪ ನಂದಗಾವಿ – ಡಿ.ಎಸ್.ಪಿ, ಬಸವನ ಬಾಗೇವಾಡಿ ಉಪವಿಭಾಗ
ಶ್ರೀಕಾಂತ್ ಕಾಂಬಳೆ – ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಸಿಂದಗಿ ಪೊಲೀಸ್ ಠಾಣೆ
ರಾಮನಗೌಡ ಬಿರಾದಾರ – ಸಿಪಿಸಿ 1708, ಮನಗೂಳಿ ಪೊಲೀಸ್ ಠಾಣೆ
ಚಿದಾನಂದ ಗಿಡಗಂಚಿ – ಸಿಪಿಸಿ 1823, ಗಾಂಧಿಚೌಕ ಪೊಲೀಸ್ ಠಾಣೆ
ಈ ಸಾಧನೆಗೆ ಜಿಲ್ಲೆಯ ಪೊಲೀಸ್ ವಲಯದಲ್ಲಿ ಹರ್ಷ ವ್ಯಕ್ತವಾಗಿದ್ದು, ಆಯ್ಕೆಯಾದ ಅಧಿಕಾರಿಗಳಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

Tags:

error: Content is protected !!