hubbali

ಬಿಆರ್‌ಟಿಎಸ್ ರಾಂಗ್ ರೂಟ್‌ನಲ್ಲಿ ಬಂದ ಬಿಎಂಡಬ್ಲ್ಯೂ ಕಾರಿಗೆ ಪಾಠ ಕಲಿಸಿದ ಬಸ್ ಚಾಲಕ

Share

ಬಿಆರ್‌ಟಿಎಸ್‌ಗೆ ಮೀಸಲಾದ ಮಾರ್ಗದಲ್ಲಿ ರಾಂಗ್ ರೂಟ್‌ನಲ್ಲಿ ಪ್ರವೇಶಿಸಿದ ಬಿಎಂಡಬ್ಲ್ಯೂ ಕಾರನ್ನು ಬಸ್ ಚಾಲಕ ಹಿಂದಿರುಗಿಸಿದ ಘಟನೆ ನಗರದ ವಿದ್ಯಾನಗರ ಬಿಆರ್‌ಟಿಎಸ್ ನಿಲ್ದಾಣದ ಹತ್ತಿರ ನಡೆದಿದೆ.

ಬಿಆರ್‌ಟಿಎಸ್ ಮಾರ್ಗದಲ್ಲಿ ರಾಂಗ್ ಸೈಡ್ ಮೂಲಕ ಕಾರು ಬಂದಿದ್ದರಿಂದ ಎದುರಿಗೆ ಬರುತ್ತಿದ್ದ ಬಿಆರ್‌ಟಿಎಸ್ ಬಸ್‌ಗೆ ಅಡಚಣೆ ಉಂಟಾಯಿತು. ಈ ವೇಳೆ ಬಸ್ ಚಾಲಕ ಕಾರನ್ನು ಮುಂದೆ ಸಾಗದಂತೆ ತಡೆದು, ರಾಂಗ್ ರೂಟ್‌ನಲ್ಲಿ ಬಂದ ವಾಹನವನ್ನು ಹಿಂದಿರುಗುವಂತೆ ಸೂಚಿಸಿದರು. ನಂತರ ಬಸ್ ತನ್ನ ಮಾರ್ಗದಲ್ಲಿ ಮುಂದುವರಿದಿತು.

ಬಿಆರ್‌ಟಿಎಸ್ ಮಾರ್ಗವು ‘ಚಿಗರಿ’ ಬಸ್‌ಗಳಿಗೆ ಮಾತ್ರ ಮೀಸಲಾಗಿರುವುದರಿಂದ ಇತರ ವಾಹನಗಳು ಪ್ರವೇಶಿಸಬಾರದು ಎಂಬ ನಿಯಮವಿದೆ. ಆದರೂ ಕೆಲವರು ನಿಯಮ ಉಲ್ಲಂಘಿಸಿ ಬಿಆರ್‌ಟಿಎಸ್ ಮಾರ್ಗದಲ್ಲಿ ಸಂಚರಿಸುವುದು ಕಂಡುಬರುತ್ತಿದೆ.

ಒಟ್ಟಿನಲ್ಲಿ ನಿಯಮ ಪಾಲನೆ ಮಾಡಿಸಿದ ಬಿಆರ್‌ಟಿಎಸ್ ಚಾಲಕರ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!