Vijaypura

ರಕ್ತ ಚಂದ್ರಗ್ರಹಣ; ವಿಜಯಪುರ ನಗರದಲ್ಲಿ ಗ್ರಹಣದ ಬಳಿಕ ದೇವರ ದರ್ಶನ ಪಡೆದ ಭಕ್ತರು

Share

ನಿನ್ನೆ ಸಂಭವಿಸಿದ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ವಿಜಯಪುರದ ಆರಾಧ್ಯ ದೈವ ಸಿದ್ದೇಶ್ವರ ದೇವಸ್ಥಾನವನ್ನು ಮಂಗಳವಾರ ಮುಚ್ಚಲಾಗಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಚಂದ್ರ ಗ್ರಹಣ ಸಂಭವಿಸುತ್ತಿದ್ದ ಕಾರಣ, 11:30ಕ್ಕೆ ವಿಶೇಷ ಪೂಜೆ ಸಲ್ಲಿಸಿ, ಗರ್ಭಗುಡಿಗೆ ಪರದೆ ಎಳೆದು ದೇವಸ್ಥಾನದ ಮಹಾ ದ್ವಾರವನ್ನು ಮುಚ್ಚಲಾಯಿತು. ಮಧ್ಯಾಹ್ನ 12 ಗಂಟೆಯಿಂದ ಸಂಜೆ 6:47ರವರೆಗೆ ದೇವಸ್ಥಾನದ ಬಾಗಿಲು ಮುಚ್ಚಿಡಲಾಗಿತ್ತು. ಗ್ರಹಣದ ನಂತರ ವಿಶೇಷ ಪೂಜೆ ಸಲ್ಲಿಸಿದ ಅರ್ಚಕರು ಚಂದ್ರ ಗ್ರಹಣ ಮುಕ್ತಾಯದ ಹಿನ್ನೆಲೆಯಲ್ಲಿ ವಿಜಯಪುರದ ಆರಾಧ್ಯ ದೈವ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮಂಗಳವಾರದಂದು ದೇವಸ್ಥಾನದ ಅರ್ಚಕರು ದೇವಸ್ಥಾನದ ಮೂರ್ತಿಯನ್ನು ತೊಳೆದು ಶುದ್ಧಗೊಳಿಸಿ, ವಿಶೇಷ ರುದ್ರಾಭಿಷೇಕ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರು ಪೂಜೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ವಿಜಯಪುರದ ಸಿದ್ದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳಗ್ಗೆ ದೇವಸ್ಥಾನಕ್ಕೆ ತೆರಳಿ ಪುರೋಹಿತರಿಂದ ವಿಧಿ ವಿಧಾನಗಳ ಮಾಹಿತಿ ಪಡೆದು, ನಂತರ ಮನೆಯಲ್ಲಿ ಆಚರಣೆ ಮಾಡಿದ್ದಾರೆ. ಗರ್ಭಿಣಿ ಮಹಿಳೆಯರು ಪಾಲಿಸಬೇಕಾದ ನಿಯಮಗಳು, ಪೂಜೆ ಹಾಗೂ ಆಹಾರ ಸೇವನೆಯ ಕುರಿತು ಮಾಹಿತಿ ಪಡೆದು ಪಾಲನೆ ಮಾಡಿರುವದಾಗಿ ದೇವಸ್ಥಾನದ ಅರ್ಚಕರು ತಿಳಿಸಿದರು.

Tags:

error: Content is protected !!