State

ಎಲ್ಲದರ ಬಗ್ಗೆಯೂ ವಿಚಿತ್ರವಾಗಿ ಧ್ವನಿ ಎತ್ತುವ ಬಿಜೆಪಿಗರು ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆಹೂ ಧ್ವನಿ ಎತ್ತಲಿ; ಡಿಕೆಶಿ

Share

ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಬಿಜೆಪಿ ಸಂಸದರುಗಳು ಈ ಬೆಲೆ ಏರಿಕೆ ಬಗ್ಗೆ ಮಾತನಾಡಲಿ. ಎಲ್ಲಾದಕ್ಕೂ ಬಹಳ ವಿಚಿತ್ರವಾಗಿ ಧ್ವನಿ ಎತ್ತುತ್ತಾರೆ. ಇದರ ಬಗ್ಗೆಯೂ ಮಾತನಾಡಲಿ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಗ್ಗೆ ಕೇಳಿದಾಗ, “ಚರ್ಚೆ ನಡೆಸಲು ಕೇಂದ್ರ ಸರ್ಕಾರಕ್ಕೆ ಏಕೆ ಭಯ. ಇದರಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಎದ್ದು ಕಾಣುತ್ತದೆ. ಸಂಸತ್ ಅಧಿವೇಶನದಲ್ಲಿ ಈ ವಿಚಾರವನ್ನ ಕೇಂದ್ರ ಸರ್ಕಾರ ಚರ್ಚೆ ಮಾಡಬೇಕು. ಈ ವಿಚಾರ ಚರ್ಚೆ ನಡೆಸಲು ಇವತ್ತಿನ ತನಕ ಅವಕಾಶ ನೀಡುತ್ತಿಲ್ಲ. ಆದ ಕಾರಣಕ್ಕೆ ಇಂಡಿಯಾ ಒಕ್ಕೂಟದ ಪ್ರತಿನಿಧಿಗಳು ಪ್ರತಿಭಟನೆ ಮಾಡುತ್ತಿದ್ದಾರೆ” ಎಂದರು. ಹೋಟೆಲ್ ಹಾಗೂ ಇತರೇ ಉದ್ದಿಮೆಗಳು ಇದರಿಂದ ತೊಂದರೆಗೆ ಒಳಗಾಗಿವೆ. ಇದರ ಬಗ್ಗೆ ನಾವು ದನಿ ಎತ್ತಬೇಕಿರುವುದು ನಮ್ಮ ಕರ್ತವ್ಯ. ಕೋಟ್ಯಂತರ ಮಹಿಳೆಯರ ಮೇಲೆ ಇದು ಪರಿಣಾಮ ಬೀರಿದೆ. ಯುದ್ದದ ಪರಿಣಾಮವಾಗಿ ಸೌದಿ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಭಾರತೀಯ ಉದ್ಯಮಿಗಳು, ಕೆಲಸಗಾರರ ಮೇಲೆ ಪರಿಣಾಮ ಬೀರಿದೆ” ಎಂದರು.

ಇನ್ನು ಸಂಸತ್ತಿನಲ್ಲಿ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ತಾವು ಏನು ಮಾಡಿದ್ದಾರೆಂಬುದನ್ನು ತಿಳಿಸಲಿ. ನಮ್ಮ ಕಾಲದಲ್ಲಿ ಮಾಡಿರುವುದನ್ನು ನಾನು ಹೇಳುತ್ತೇನೆ. ಈಗ ನಾನು ಅವರಿಗೆ ಡಿಸ್ಟರ್ಬ್ ಮಾಡಲ್ಲ. ಈ ವಯಸ್ಸಿನಲ್ಲಿ ಅವರಿಗೆ ಅಟ್ಯಾಕ್ ಮಾಡಿದಂತಾಗುತ್ತದೆ ಎಂದರು.

Tags:

error: Content is protected !!