• ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ
• ಮಹಿಳಾ ಸದಸ್ಯೆಯರಿಗೆ ಹೊಲಿಗೆ ಯಂತ್ರ ವಿತರಣೆ
• ಆಧ್ಯಾತ್ಮ ಮತ್ತು ಕಾನೂನು ಅರಿವಿನ ಜಾಗೃತಿ
• ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಉಪಕ್ರಮ
ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಮಹಿಳಾ ಘಟಕದ ವತಿಯಿಂದ ಮಹಿಳಾ ದಿನಾಚರಣೆ ಮತ್ತು ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮ ಆಚರಿಸಲಾಯಿತು.
ಜಿಲ್ಲಾ ಅಧ್ಯಕ್ಷರಾದ ಸ್ಮಿತಾ ಪೂಜಾರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಹಾಗೂ ಸಾಹಿತಿಗಳು ಆದ ಡಾ.ವಿಜಯಲಕ್ಷ್ಮಿ ಪುಟ್ಟಿ ಅವರು ಮಾತನಾಡಿ ಮಹಿಳೆಯರು ಸಮಾಜದ ಎಲ್ಲಾ ವರ್ಗಗಳಲ್ಲಿ ಮಹಿಳೆಯರು ಹೆಚ್ಚು ಆಸಕ್ತಿ ವಹಿಸಿ ಪಾಲ್ಗೊಳ್ಳಬೇಕು ಮಹಿಳೆಯರು ಸಂಸ್ಕೃತಿ ಉಳಿಸಿ ಬೆಳೆಸಲು ತಮ್ಮ ಮಕ್ಕಳಿಗೆ ಮನೆ ಇಂದಲೇ ಮೊದಲ ಪಾಠ ಕಲಿಸಬೇಕು ಎಲ್ಲಾ ವೃತ್ತಿಯಲ್ಲಿ ಮಹಿಳೆಯರಿಗೆ ಸಮ ಪಾಲು ಇರಬೇಕು ಎಂದರು.
ಶಿವೋಹಂ ಆಧ್ಯಾತ್ಮಿಕ ಕೇಂದ್ರದ ಡಾ.ಸ್ಪೂರ್ತಿ ಅವರು ಮಾತನಾಡಿ ಮಹಿಳೆಯರು ಸಮಾಜದಲ್ಲಿ ಮುಖ್ಯ ವಾಹಿನಿಗೆ ಬರಬೇಕು ವೃತ್ತಿ ಜೀವನದ ಜೊತೆಗೆ ಆಧ್ಯಾತ್ಮಿಕವಾಗಿ ತೊಡಗಿಸಿಕೊಂಡು ಮನ ಮನಸ್ಸು ಸಂತೋಷ ನೆಮ್ಮದಿ ಇಂದ ಬದುಕಬೇಕೆಂದರು.
ಉಚ್ಚ ನ್ಯಾಯಾಲಯ ವಕೀಲರಾದ ವಿದ್ಯಾ ಪಾಟೀಲ್ ಅವರು ಮಹಿಳೆಯರು ಬದುಕಿನ ಜೊತೆಗೆ ಕನಿಷ್ಠ ಕಾನೂನು ತಿಳುವಳಿಕೆ ತಿಳಿದಿರಬೇಕು ಮಹಿಳೆಯರು ಹೆಚ್ಚು ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು, ತಮ್ಮ ಹಾಗೂ ಕುಟುಂಬದ ನಡುವೆ ಯಾವುದೇ ಬಿರುಕು ಬರದ ಹಾಗೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಮಹಿಳಾ ಸದಸ್ಯರುಗಳಿಗೆ ಹೊಲಿಗೆಯಂತ್ರ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮದದಲ್ಲಿ ರಾಜ್ಯಾಧ್ಯಕ್ಷರಾದ ಮಹೇಶ್ ಕುಮಾರ್, ಮಹಿಳಾ ಘಟಕದ ಉಪಾಧ್ಯಕ್ಷರು ಮಂಜುಳಾ ಕುಶಪ್ಪನವರ, ಕಾರ್ಯದರ್ಶಿ ಜಯಶ್ರೀ ಮತ್ತಿಕೊಪ್ಪ, ಜಿಲ್ಲಾ ಗೌರವಾಧ್ಯಕ್ಷರಾದ ಕೆಂಪಣ್ಣ ಶಿರಹಟ್ಟಿ, ರಾಯಬಾಗ, ಚಿಕ್ಕೋಡಿ,ಹುಕ್ಕೇರಿ ತಾಲ್ಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಬೆಳಗಾವಿ ತಾಲ್ಲೂಕು ಅಧ್ಯಕ್ಷರು ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಪಾಲ್ಗೊಂಡಿದ್ದರು.
