Belagavi

ಬೆಳಗಾವಿಯಲ್ಲಿ ‘ಖಮೇನಿ’ ಭಾವಚಿತ್ರ ವಿವಾದ: ಕಠಿಣ ಕ್ರಮ ಕೈಗೊಳ್ಳದಿದ್ದರೆ ನಾವೇ ತೆರವುಗೊಳಿಸುತ್ತೇವೆ – ಪೊಲೀಸ್ ಇಲಾಖೆಗೆ ಪ್ರಮೋದ್ ಮುತಾಲಿಕ್ ಎಚ್ಚರಿಕೆ!

Share

• ಬೆಳಗಾವಿಯಲ್ಲಿ ಖಮೇನಿ ಭಾವಚಿತ್ರಕ್ಕೆ ತೀವ್ರ ವಿರೋಧ
• ದೇಶದ್ರೋಹಿಗಳ ವಿರುದ್ಧ ಕ್ರಮಕ್ಕೆ ಮುತಾಲಿಕ್ ಆಗ್ರಹ
• ತೆರವುಗೊಳಿಸದಿದ್ದರೆ ನಾವೇ ಬರುತ್ತೇವೆ: ಖಡಕ್ ಎಚ್ಚರಿಕೆ
• ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ ಶ್ರೀರಾಮಸೇನೆ

ಭಾರತ ವಿರೋಧಿ ಅಯತೊಲ್ಲಾ ಖಮೇನಿ ಭಾವಚಿತ್ರಗಳನ್ನು ಬೆಳಗಾವಿಯ ಗಲ್ಲಿಗಳಲ್ಲಿ ಅಳವಡಿಸಿರುವುದು ಅಕ್ಷಮ್ಯ ದೇಶದ್ರೋಹದ ಕೃತ್ಯ ಎಂದು ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ. ತಕ್ಷಣವೇ ಈ ಪೋಸ್ಟರ್‌ಗಳನ್ನು ತೆರವುಗೊಳಿಸಿ, ಅಳವಡಿಸಿದವರನ್ನು ಬಂಧಿಸದಿದ್ದರೆ ನಾವೇ ಇಳಿಯುತ್ತೇವೆ ಎಂದು ಪೊಲೀಸ್ ಆಯುಕ್ತರಿಗೆ ಮುತಾಲಿಕ್ ಅಂತಿಮ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ನಗರದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಅಳವಡಿಸಲಾಗಿರುವ ಕೆಲವು ಬ್ಯಾನರ್‌ಗಳು ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿವೆ. ಇರಾನ್‌ನ ಧಾರ್ಮಿಕ ಮುಖಂಡ ಅಯತೊಲ್ಲಾ ಖಮೇನಿ ಅವರ ಭಾವಚಿತ್ರಗಳನ್ನು ನಗರದ ವಿವಿಧೆಡೆ ಹಾಕಿರುವ ಕ್ರಮವನ್ನು ಶ್ರೀರಾಮಸೇನೆ ತೀವ್ರವಾಗಿ ಖಂಡಿಸಿದೆ. ದೇಶದ್ರೋಹಿ ಕೃತ್ಯ ಎಂದು ಬಣ್ಣಿಸಿರುವ ಪ್ರಮೋದ್ ಮುತಾಲಿಕ್, ತಕ್ಷಣವೇ ಅವುಗಳನ್ನು ತೆರವುಗೊಳಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.

ನಂತರ ಮಾತನಾಡಿದ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಆಯತುಲ್ಲಾ ಖಮೇನಿ ಹತ್ಯೆಯನ್ನು ಖಂಡಿಸಿ ದೇಶದ ಮುಸ್ಲೀಂಮರು ಪ್ರತಿಭಟಿಸಿದ್ದಾರೆ. ಅಲ್ಲದೇ, ಬೆಳಗಾವಿಯ ಗಾಂಧಿ ನಗರ, ಕೊತ್ವಾಲ್ ಗಲ್ಲಿ, ಶಾಹೂನಗರ, ಕಾಮತ್ ಗಲ್ಲಿ ಇನ್ನುಳಿದ ಕಡೆ ಖಮೇನಿ ಕಟೌಟ್ ಹಾಕಲಾಗಿದೆ. ದೇಶದ್ರೋಹಿ, ಮಹಿಳಾ ವಿರೋಧಿಯಾಗಿರುವ ವ್ಯಕ್ತಿಯ ಖಮೈನಿ ಭಾವಚಿತ್ರ ನಮ್ಮ ದೇಶದಲ್ಲೇ ಏಕೆ? ಇಂತಹ ವ್ಯಕ್ತಿಯನ್ನು ವೈಭವಿಕರಿಸುವುದನ್ನು ಖಂಡಿಸುತ್ತಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿಬೇಕು. ಛತ್ರಪತಿ ಶಿವಾಜೀ ಮಹಾರಾಜರು ಅಫ್ಜಲ್’ಖಾನ್’ನ್ನು ವಧಿಸಿದ್ದು ಇತಿಹಾಸವಿದೆ. ಇದರ ಭಾವಚಿತ್ರ ಅಳವಡಿಸಿದರೇ, ಕೂಡಲೇ ಬಂದು ತೆರವುಗೊಳಸಲಾಗುತ್ತದೆ. ಈಗ ಖಮೇನಿ ಭಾವಚಿತ್ರಗಳನ್ನು ಅಳವಡಿಸಿದವರ ವಿರುದ್ದ ದೇಶದ್ರೋಹಿ ಕಾನೂನು ಕ್ರಮಕೈಗೊಂಡು ಬಂಧಿಸಬೇಕು. ಇಲ್ಲದಿದ್ದರೇ ನಾವೇ ಹೋಗಿ ಅವುಗಳನ್ನು ತೆರವುಗೊಳಿಸಬೇಕಾಗುತ್ತದೆ ಮುಂದೆ ನಡೆಯುವ ಅನಾಹುತಗಳಿಗೆ ನೀವೇ ಹೊಣೆಯಾಗುತ್ತೀರಿ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರವಿಕುಮಾರ್ ಕೋಕಿತ್ಕರ್, ಉಪಾಧ್ಯಕ್ಷ ವಿನಯ ಅಂಗ್ರೋಳ್ಳಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

Tags:

error: Content is protected !!