Belagavi

ಬೆಳಗಾವಿ ಉದ್ಯಮಬಾಗದಲ್ಲಿ ಮಟಕಾ ಅಡ್ಡೆ ಮೇಲೆ ಪೊಲೀಸರ ದಾಳಿ; ಹೆರಾಯಿನ್ ವಶಕ್ಕೆ!

Share

• ಉದ್ಯಮಬಾಗ ಪೊಲೀಸರಿಂದ ಮಟಕಾ ಅಡ್ಡೆ ದಾಳಿ
• ದಾಳಿಯಲ್ಲಿ ಬ್ರೌನ್ ಶುಗರ್ ಹೆರಾಯಿನ್ ವಶ
• ಒಟ್ಟು ಮೂವರು ಆರೋಪಿಗಳ ಬಂಧನ
• ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿ

ಬೆಳಗಾವಿ ನಗರದಲ್ಲಿ ಅಕ್ರಮ ಚಟುವಟಿಕೆಗಳ ವಿರುದ್ಧ ಪೊಲೀಸರು ಸಮರ ಸಾರಿದ್ದಾರೆ. ಇದೀಗ ಉದ್ಯಮಬಾಗ ಠಾಣಾ ಪೊಲೀಸರು ಮಟಕಾ ಅಡ್ಡೆ ಮೇಲೆ ದಾಳಿ ನಡೆಸಿ, ಓರ್ವನನ್ನು ವಶಕ್ಕೆ ಪಡೆಯುವುದರ ಜೊತೆಗೆ ಮಾದಕ ದ್ರವ್ಯವನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಳಗಾವಿಯ ಉದ್ಯಮಬಾಗ ಪೊಲೀಸ್ ಠಾಣಾ ವ್ಯಾಪ್ತಿಯ ಜಿಐಟಿ ಕಾಲೇಜು ರಸ್ತೆಯಲ್ಲಿನ ವಿನಾಯಕ ಟೂಲ್ಸ್ ಅಂಗಡಿ ಹತ್ತಿರ, ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. 06/03/2026 ರಂದು ಪಿಎಸ್‌ಐ ಶ್ರೀ. ಪಿ.ಜಿ. ಗಂಡವ್ವಗೋಳ ಹಾಗೂ ತಂಡವು ನಡೆಸಿದ ಈ ದಾಳಿಯಲ್ಲಿ, ಸುಧೀರ ಅರ್ಜುನರಾವ್ ಬಿರ್ಜೆ (55) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆ ವೇಳೆ, ಈತ ಸಂಗ್ರಹಿಸಿದ ಹಣವನ್ನು ಸಂಜಯ ಚಿಂಚನೇಕರ ಎಂಬುವವರಿಗೆ ನೀಡುವುದಾಗಿ ಒಪ್ಪಿಕೊಂಡಿದ್ದು, ಇಬ್ಬರೂ ಆರೋಪಿಗಳ ವಿರುದ್ಧ ಉದ್ಯಮಬಾಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯು ಕೇವಲ ಮಟಕಾಕ್ಕೆ ಮಾತ್ರ ಸೀಮಿತವಾಗಿರದೆ, ಒಟ್ಟಾರೆ ಎರಡು ಪ್ರಕರಣಗಳಲ್ಲಿ ಒಟ್ಟು ಮೂವರು ಆರೋಪಿತರನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರು ಆರೋಪಿಗಳಿಂದ ಸುಮಾರು 25,400 ರೂಪಾಯಿ ಮೌಲ್ಯದ 12.96 ಗ್ರಾಂ ತೂಕದ ಬ್ರೌನ್ ಕಲರ್ ಹೆರಾಯಿನ್ ಹಾಗೂ ಮಟಕಾ ಚೀಟಿಗಳನ್ನು ಜಪ್ತಿ ಮಾಡಿದ್ದಾರೆ. ಈ ನಿರಂತರ ಕಾರ್ಯಾಚರಣೆಯನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಸಿಪಿ ಅವರು ಶ್ಲಾಘಿಸಿದ್ದು, ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಇಲಾಖೆಯು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ.

Tags:

error: Content is protected !!