• ಬೆಳಗಾವಿಯಲ್ಲಿ ಕರುನಾಡ ರಕ್ಷಣಾ ವೇದಿಕೆ ಗರ್ಜನೆ
• ಪುಂಡ ಎಂಇಎಸ್ ನಾಯಕರಿಗೆ ತಕ್ಕ ಶಾಸ್ತಿ
• ಗಡಿ ಜಿಲ್ಲೆಯಲ್ಲಿ ಕರವೇ ಸಂಘಟನೆ ಬಲವರ್ಧನೆ
• ಮಹಾಜನ್ ವರದಿಯೇ ಅಂತಿಮ ಎಂದ ಪದಾಧಿಕಾರಿಗಳು
ಬೆಳಗಾವಿ ಗಡಿಭಾಗದಲ್ಲಿ ಮತ್ತೆ ಕನ್ನಡದ ಕಹಳೆ ಮೊಳಗಿದೆ. ಎಂಇಎಸ್ ಪುಂಡರ ಸತತ ಉದ್ಧಟತನಕ್ಕೆ ಬ್ರೇಕ್ ಹಾಕಲು ಕರುನಾಡ ರಕ್ಷಣಾ ವೇದಿಕೆ ಈಗ ಸನ್ನದ್ಧವಾಗಿದ್ದು, ಇಂದು ಬೆಳಗಾವಿಯ ನ್ಯೂ ಸರ್ಕಿಟ್ ಹೌಸ್‌ನಲ್ಲಿ ನಡೆದ ಮಹತ್ವದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯೊಂದಿಗೆ ಎದುರಾಳಿಗಳಿಗೆ ನೇರ ಎಚ್ಚರಿಕೆ ರವಾನಿಸಲಾಗಿದೆ.
ಕುಂದಾನಗರಿ ಬೆಳಗಾವಿಯ ನ್ಯೂ ಸರ್ಕಿಟ್ ಹೌಸ್‌ನಲ್ಲಿ ಇಂದು ಕರುನಾಡ ರಕ್ಷಣಾ ವೇದಿಕೆಯ ಪ್ರಮುಖ ಸಭೆ ಜರುಗಿತು. ಈ ಸಂದರ್ಭದಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಅಧಿಕೃತವಾಗಿ ಆಯ್ಕೆ ಮಾಡಲಾಯಿತು. ವಿಶೇಷವೆಂದರೆ, ಸಂಘಟನೆಯ ಕಾನೂನು ಹೋರಾಟಕ್ಕೆ ಮತ್ತಷ್ಟು ಬಲ ತುಂಬಲು ಇಬ್ಬರು ಹಿರಿಯ ನ್ಯಾಯವಾದಿಗಳನ್ನು ಜಿಲ್ಲಾ ಕಾನೂನು ಸಲಹೆಗಾರರನ್ನಾಗಿ ನೇಮಕ ಮಾಡಿ, ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. ಇದೇ ವೇದಿಕೆಯಲ್ಲಿ ಮಾತನಾಡಿದ ಮುಖಂಡರು, “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಇದರಲ್ಲಿ ಎರಡನೇ ಮಾತಿಲ್ಲ” ಎಂದು ಪುನರುಚ್ಚರಿಸಿದರು.
ಇತ್ತೀಚಿನ ದಿನಗಳಲ್ಲಿ ಗಡಿ ವಿಷಯದಲ್ಲಿ ಅನಗತ್ಯವಾಗಿ ಕ್ಯಾತೆ ತೆಗೆಯುತ್ತಿರುವ ಎಂಇಎಸ್ ಪುಂಡರಿಗೆ ಸಂಘಟನೆಯು ತೀಕ್ಷ್ಣವಾಗಿ ಎಚ್ಚರಿಸಿದೆ. ಬೆಳಗಾವಿ ಮಹಾಪೌರರನ್ನು ಭೇಟಿಯಾಗಿ, “ಗಡಿ ವಿವಾದದಲ್ಲಿ ಮಹಾಜನ್ ವರದಿಯೇ ಅಂತಿಮ” ಎಂದು ಅಧಿಕೃತ ಠರಾವು ಪಾಸು ಮಾಡುವಂತೆ ಮನವಿ ಸಲ್ಲಿಸಲಾಗಿದೆ. ಈ ಠರಾವನ್ನು ವಿರೋಧಿಸಿ ಗಡಿಯಲ್ಲಿ ಪ್ರತಿಭಟನೆಗೆ ಮುಂದಾಗಿರುವ ಎಂಇಎಸ್ ನಾಯಕರಿಗೆ ತಕ್ಕ ಪಾಠ ಕಲಿಸುವುದಾಗಿ ಕರವೇ ಕಾರ್ಯಕರ್ತರು ಗುಡುಗಿದ್ದಾರೆ. ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸಿದರೆ ಪರಿಣಾಮ ನೆಟ್ಟಗಿರಲ್ಲ ಎಂಬ ಸಂದೇಶವನ್ನು ಈ ಸಭೆಯ ಮೂಲಕ ರವಾನಿಸಲಾಗಿದೆ. ಬೈಟ್
Belagavi
ಬೆಳಗಾವಿಯಲ್ಲಿ ಕರವೇ ಅಬ್ಬರ: ಎಂಇಎಸ್ ಪುಂಡಾಟಿಕೆಗೆ ಖಡಕ್ ಎಚ್ಚರಿಕೆ, ನೂತನ ಪದಾಧಿಕಾರಿಗಳ ಆಯ್ಕೆ
