Belagavi

ಕೆ.ಎಲ್.ಎಸ್. ಐ.ಎಂ.ಇ.ಆರ್‌ನಲ್ಲಿ ವನ್ಯಜೀವಿ ಛಾಯಾಗ್ರಹಣದ ಮೂಲಕ ಮ್ಯಾನೇಜ್‌ಮೆಂಟ್ ಪಾಠ: ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದ ಕಿರಣ್ ಕುಲಕರ್ಣಿ

Share

• ಕೆ.ಎಲ್.ಎಸ್. ಐ.ಎಂ.ಇ.ಆರ್‌ನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ
• ವನ್ಯಜೀವಿ ಛಾಯಾಗ್ರಹಣದ ಮೂಲಕ ಮ್ಯಾನೇಜ್‌ಮೆಂಟ್ ಪಾಠ
• ಯಶಸ್ಸಿಗೆ ಶಿಸ್ತು ಮತ್ತು ಯೋಜನೆ ಅನಿವಾರ್ಯ
• ವಿದ್ಯಾರ್ಥಿಗಳಿಗೆ ಕಿರಣ್ ಕುಲಕರ್ಣಿ ಸ್ಫೂರ್ತಿಯ ಮಾತು

ಬೆಳಗಾವಿಯ ಕೆ.ಎಲ್.ಎಸ್. ಐ.ಎಂ.ಇ.ಆರ್ ಸಂಸ್ಥೆಯಲ್ಲಿ ಎಂ.ಬಿ.ಎ ವಿದ್ಯಾರ್ಥಿಗಳಿಗಾಗಿ “ವನ್ಯಜೀವಿ ಛಾಯಾಗ್ರಹಣದ ಮೂಲಕ ಮ್ಯಾನೇಜ್‌ಮೆಂಟ್ ಪಾಠಗಳು” ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಈ ಅಧಿವೇಶನದಲ್ಲಿ ವನ್ಯಜೀವಿ ಛಾಯಾಗ್ರಹಣದ ಅನುಭವಗಳನ್ನು ಮ್ಯಾನೇಜ್‌ಮೆಂಟ್ ತತ್ವಗಳಿಗೆ ಅನ್ವಯಿಸಿ ವಿವರಿಸಲಾಯಿತು.
ಕೆ.ಎಲ್.ಎಸ್. ಐ.ಎಂ.ಇ.ಆರ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಡಿಸಿಎಂ ಶ್ರೀರಾಮ್ ಲಿಮಿಟೆಡ್‌ನ ಮಾಜಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಮತ್ತು ಫರ್ಟಿಲೈಸರ್ ಅಸೋಸಿಯೇಷನ್ ಆಫ್ ಇಂಡಿಯಾದ ತಾಂತ್ರಿಕ ಸದಸ್ಯರಾದ ಕಿರಣ್ ಎನ್. ಕುಲಕರ್ಣಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಡಾ. ಆರಿಫ್ ಶೇಖ್ ಅವರ ಮಾರ್ಗದರ್ಶನದಲ್ಲಿ ಮತ್ತು ಡಾ. ಸುಶೀಲ್ ಕೆ. ಪರೆ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ವೇಳೆ ಮಾತನಾಡಿದ ಕಿರಣ್ ಕುಲಕರ್ಣಿ, ವನ್ಯಜೀವಿ ಛಾಯಾಗ್ರಹಣದಲ್ಲಿ ತಮಗೆ ಸಿಕ್ಕಿದ ಅನುಭವಗಳನ್ನು ವೃತ್ತಿಜೀವನಕ್ಕೆ ಹೇಗೆ ಅನ್ವಯಿಸಿಕೊಳ್ಳಬಹುದು ಎಂಬುದನ್ನು ವಿವರಿಸಿದರು. “ಛಾಯಾಗ್ರಹಣ ಕೇವಲ ಹವ್ಯಾಸವಲ್ಲ, ಅದು ಶಿಸ್ತು, ಯೋಜನೆ, ಗಮನ ಮತ್ತು ತಾಳ್ಮೆಯನ್ನು ಕಲಿಸುವ ಮಾಧ್ಯಮ. ವೃತ್ತಿಜೀವನದಲ್ಲಿ ಯಶಸ್ವಿಯಾಗಲು ಕೌತುಕ, ಧೈರ್ಯ, ಮತ್ತು ನಿರಂತರ ಕಲಿಕೆಯ ಮನೋಭಾವ ಅತ್ಯಗತ್ಯ,” ಎಂದು ಕಿವಿಮಾತು ಹೇಳಿದರು.

Tags:

error: Content is protected !!