• ಮಹಿಳೆ ಒಂದು ನಡೆಯುವ ವಿಶ್ವವಿದ್ಯಾಲಯ: ಚಂದಾವರಕರ
• ನಾಗನೂರು ಮಠದಲ್ಲಿ ‘ಕಲಾ-ಸಂತೆ’ ವೈಭವ ಉದ್ಘಾಟನೆ
• ಮಕ್ಕಳ ಮೇಲೆ ಪಾಲಕರ ನಿಗಾ ಅಗತ್ಯ: ನಾಗರಾಜು
• ಕಲಾಕೃತಿಗಳಿಗೆ ವೇದಿಕೆ ಕಲ್ಪಿಸಿದ ಮಹಿಳಾ ಸಮಾಜ

ಮಹಿಳೆ ಕೇವಲ ವ್ಯಕ್ತಿಯಲ್ಲ, ಆಕೆಯೊಂದು ನಡೆಯುವ ವಿಶ್ವವಿದ್ಯಾಲಯ’ ಎಂದು ಬೆಳಗಾವಿ ಕಲಾ-ಸಂತೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ. ಮೀನಾ ಚಂದಾವರಕರ ಅವರು ಬಣ್ಣಿಸಿದರು.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಳಗಾವಿಯ ಶಿವಬಸವ ನಗರದ SGBIT ಆವರಣದಲ್ಲಿರುವ ಶ್ರೀ ನಾಗನೂರು ರುದ್ರಾಕ್ಷಿಮಠದಲ್ಲಿ ‘ಕಲಾ-ಸಂತೆ’ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಭವ್ಯ ಚಾಲನೆ ದೊರೆಯಿತು. ಅಂಗಾಯತ ಮಹಿಳಾ ಸಮಾಜ ಮತ್ತು ಶ್ರೀ ನಾಗನೂರು ರುದ್ರಾಕ್ಷಿಮಠದ ಸಹಯೋಗದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಶ್ರೀ. ಡಾ. ಅಲ್ಲಮಪ್ರಭು ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳು ಹಾಗೂ ಎಸ್ಆರ್ಸಿ-ಎನ್ಸಿಟಿಇ ನವದೆಹಲಿಯ ಚೇರ್ಪರ್ಸನ್ ಆಗಿರುವ ಡಾ. ಮೀನಾ ಚಂದಾವರಕರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಡಾ. ಮೀನಾ ಚಂದಾವರಕರ ಕುಟುಂಬ ಮತ್ತು ಸಮಾಜದ ಸೇವೆಗಾಗಿ ಹುಟ್ಟಿರುವುದು ಮಹಿಳೆಯರಿಗೆ ಸೌಭಾಗ್ಯ. ದಿನನಿತ್ಯ ಮಹಿಳಾ ದಿನಾಚರಣೆ ಆಚರಿಸಿದೇ ತಪ್ಪೇನಿಲ್ಲ. ಮಹಿಳೆಯೆಂದರೇ ಸಂಸ್ಕೃತಿ. ಅದನ್ನು ರೂಢಿಸುವುದು ಮಹಿಳೆಯ ವೈಶಿಷ್ಟಯ. ಓರ್ವ ಮಹಿಳೆ ಒಂದು ವಿಶ್ವವಿದ್ಯಾಲಯವಿದ್ದಂತೆ. ವಂದೇ ಮಾತರಂ ಕವಿ ಬಕೀಮ್ ಚಂದ್ರ ಚಾಟರ್ಜಿ ಅವರ ತ್ವಂ ಹೀ ದುರ್ಗಾ ದಶಪ್ರಹರಣಧಾರಿಣಿ ಎಂಬ ವಾಕ್ಯವನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಮರಾಠಾ ಮಂಡಳ ಸಮೂಹ ಸಂಸ್ಥೆಗಳ ಅಧ್ಯಕ್ಷೆ ಡಾ. ರಾಜಶ್ರೀ ನಾಗರಾಜು ಅವರು ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು ರಾಜಶ್ರೀ ನಾಗರಾಜು ಅವರ, ಮಕ್ಕಳು ಶಾಲೆಯ ವೇಳೆ ಸಿಗರೇಟ್ ಸೇದುವುದು, ಮಾದಕ ವಸ್ತುಗಳ ವ್ಯಸನಿಗಳಾಗುವುದು ದುರದೃಷ್ಟಕರ. ಶಿಕ್ಷಣದೊಂದಿಗೆ ಮಾದಕ ವಸ್ತು ಮುಕ್ತಗೊಳಿಸುವ ಜಾಗೃತಿ ಕೂಡ ನಿರ್ಮಾಣವಾಗಬೇಕು. ಮಕ್ಕಳಿಗೆ ಶಾಲೆಯ ಸಮಯ ಹೆಚ್ಚಾಗಿರಬೇಕು. ಅವರ ಚಲನ ವಲನಗಳ ಮೇಲೆ ಪಾಲಕರು ನಿಗಾ ಇಡಬೇಕು. ಸೋಷಿಯಲ್ ಮಿಡೀಯಾ ಮತ್ತು ಟಿ.ವ್ಹಿಗಳಲ್ಲಿ ತಾಯಿ ಕಳೆದು ಹೋಗಬಾರದು. ಮಕ್ಕಳು ಮತ್ತು ಪಾಲಕರ ನಡುವೆ ಬಾಂಧವ್ಯ ಕಡಿಮೆಯಾಗುತ್ತಿದೆ. ನಮ್ಮ ಸಂಸ್ಕೃತಿ ಮರೆಯಾಗುತ್ತಿರುವುದು ದುಃಖಕರ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಅಂಗಾಯತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ ವಹಿಸಿದ್ದರು. ಈ ಸಂದರ್ಭದಲ್ಲಿ ಉತ್ತರ ಶಾಸಕ ಆಸೀಫ್ ಸೇಠ , ಸಂಘಟನೆಯ ಕಾರ್ಯದರ್ಶಿ ರಕ್ಷಾ ದೇಗಿನಾಳ, ಸಹ ಕಾರ್ಯದರ್ಶಿ ಸರೋಜಾ ನಿಶಾನದಾರ ಸೇರಿದಂತೆ ಸಮಾಜದ ಎಲ್ಲಾ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಮಹಿಳಾ ಕೌಶಲ್ಯ ಮತ್ತು ಕಲಾಕೃತಿಗಳನ್ನು ಪ್ರೋತ್ಸಾಹಿಸುವ ಈ ಮೇಳಕ್ಕೆ ಮೆರುಗು ನೀಡಿದರು.
