Belagavi

ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಒಡಿಸ್ಸಿ 2026’ ರಾಷ್ಟ್ರಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಹಬ್ಬಕ್ಕೆ ಅದ್ಧೂರಿ ಚಾಲನೆ

Share

• ಜೆಸಿಇ ಬೆಳಗಾವಿಯಲ್ಲಿ ‘ಒಡಿಸ್ಸಿ’ಯ ಸಂಭ್ರಮ
• ರಾಷ್ಟ್ರಮಟ್ಟದ ತಾಂತ್ರಿಕ ಕಲೆಗಳ ಮಹಾಸಂಗಮ.
• ಡಿಸಿಪಿ ನಾರಾಯಣ ಬರಮಣಿ ಅವರಿಂದ ಉದ್ಘಾಟನೆ
• ವಿದ್ಯಾರ್ಥಿ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಸಜ್ಜು
ಬೆಳಗಾವಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದಿನಿಂದ ‘ಒಡಿಸ್ಸಿ 2026’ ಎಂಬ ರಾಷ್ಟ್ರಮಟ್ಟದ ತಾಂತ್ರಿಕ ಹಾಗೂ ಸಾಂಸ್ಕೃತಿಕ ಹಬ್ಬದ ಸಡಗರ ಆರಂಭವಾಗಿದೆ. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿರುವ ಈ ಬೃಹತ್ ಕಾರ್ಯಕ್ರಮಕ್ಕೆ ಬೆಳಗಾವಿ ನಗರದ ಡಿಸಿಪಿ ನಾರಾಯಣ ಬರಮಣಿ ಅವರು ಇಂದು ಚಾಲನೆ ನೀಡಿದರು.

ಬೆಳಗಾವಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನ (JCE) ಸರ್ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಮಾರ್ಚ್ 27 ರಂದು ಅತ್ಯಂತ ವೈಭವದಿಂದ ‘ಒಡಿಸ್ಸಿ 2026’ ರಾಷ್ಟ್ರಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಹಬ್ಬವನ್ನು ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ನಗರದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ನಾರಾಯಣ ಬರಮಣಿ ಅವರು ದೀಪ ಬೆಳಗುವ ಮೂಲಕ ಹಬ್ಬಕ್ಕೆ ಚಾಲನೆ ನೀಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಅಭಿವೃದ್ಧಿಯ ಜೊತೆಗೆ ಇಂತಹ ಸಾಂಸ್ಕೃತಿಕ ವೇದಿಕೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಭವ್ಯ ಸಮಾರಂಭದಲ್ಲಿ ಜೆಜಿಐ ಉತ್ತರ ಕರ್ನಾಟಕದ ಮ್ಯಾನೇಜ್‌ಮೆಂಟ್ ಸದಸ್ಯರಾದ ಶ್ರದ್ಧಾ, ಕಾಲೇಜಿನ ಪ್ರಾಚಾರ್ಯ ಹಾಗೂ ನಿರ್ದೇಶಕರಾದ ಡಾ. ಜೆ. ಶಿವಕುಮಾರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಯೋಜಕರಾದ ಪ್ರೊ. ಶಹಾಕ್ ಪಾಟೀಲ್, ಸಂಚಾಲಕರಾದ ಡಾ. ರೋಹಿತ್‌ರಾಜ್ ಎಸ್. ಹಾಗೂ ಕಾರ್ಯಕ್ರಮ ಸಂಯೋಜಕಿ ಪ್ರೊ. ವರ್ಷಾ ಗೋಕಾಕ್ ಅವರ ನೇತೃತ್ವದಲ್ಲಿ ಸಮಾರಂಭ ಅಚ್ಚುಕಟ್ಟಾಗಿ ಜರುಗಿತು. ಈ ವೇಳೆ ಗಣ್ಯರು ಮಾರ್ಗದರ್ಶನ ಮಾಡಿದರು. ಬೈಟ್
ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ನೂರಾರು ವಿದ್ಯಾರ್ಥಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು. ಮುಂದಿನ ದಿನಗಳಲ್ಲಿ ವಿವಿಧ ತಾಂತ್ರಿಕ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಕ್ಯಾಂಪಸ್‌ನಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ.

Tags:

error: Content is protected !!