Belagavi

ಮಹಿಳಾ ದಿನಾಚರಣೆ ಅಂಗವಾಗಿ ‘ಫ್ಲೀ ಮಾರ್ಕೇಟ್’ ವಸ್ತು ಪ್ರದರ್ಶನ

Share

1. ಮಹಿಳಾ ದಿನಾಚರಣೆ: ಬೆಳಗಾವಿಯಲ್ಲಿ ಫ್ಲೀ ಮಾರ್ಕೇಟ್
2. ಮಂಡಳದ ಕಾರ್ಯವನ್ನು ಶ್ಲಾಘಿಸಿದ ಲಕ್ಷ್ಮೀ ಖಿಲಾರಿ
3. ಮಹಿಳಾ ಆತ್ಮವಿಶ್ವಾಸ ಹೆಚ್ಚಿಸಿದ ವಿಶೇಷ ವಸ್ತು ಪ್ರದರ್ಶನ
4. ಯಶಸ್ವಿಯಾಗಿ ನೆರವೇರಿದ ಗೌರಿ ಮಹಿಳಾ ಮಂಡಳದ ಕಾರ್ಯಕ್ರಮ

ಬೆಳಗಾವಿಯ ಗೌರಿ ಮಹಿಳಾ ಮಂಡಳದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಫ್ಲೀ ಮಾರ್ಕೇಟ್ ಎಂಬ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ಬೆಳಗಾವಿಯ ಸದಾಶಿವನಗರದಲ್ಲಿರುವ ಶ್ರೀ ಸದಾಶಿವ ಮಂದಿರದಲ್ಲಿ ಗೌರಿ ಮಹಿಳಾ ಮಂಡಳದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಫ್ಲೀ ಮಾರ್ಕೇಟ್ ಎಂಬ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ಬೆಲಾ ಸಿಇಓ ಲಕ್ಷ್ಮೀ ಖಿಲಾರಿ ಅವರು ಉಪಸ್ಥಿತರಿದ್ಧು, ದೀಪ ಬೆಳಗಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆಯನ್ನು ನೀಡಿದರು. ಪ್ರದರ್ಶನದಲ್ಲಿ ವಿವಿಧ ಪ್ರಕಾರದ ವಸ್ತುಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿತ್ತು.

ಗೌರಿ ಮಹಿಳಾ ಮಂಡಳದ ಕಾರ್ಯವನ್ನು ಶ್ಲಾಘಿಸಿದ ಅವರು, ಗೌರಿ ಮಹಿಳಾ ಮಂಡಳದ ಪ್ರತಿಯೊಬ್ಬ ಸದಸ್ಯರು ಕಾರ್ಯಚಟುವಟಿಕೆಗಳಲ್ಲಿ ತೊಡಗಿದ್ದು, ಎಲ್ಲರೂ ಸಕ್ರಿಯರಾಗಿದ್ದಾರೆ. ನಮ್ಮ ಬೆಲಾ ಬಝಾರ್’ನಲ್ಲಿ 33 ಸಾವಿರ ಮಹಿಳೆಯರಿದ್ದಾರೆ. ಬೆಳಗಾವಿಯ ಮಹಿಳೆಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಇಂತಹ ಪ್ರದರ್ಶನಗಳು ಪೂರಕವಾಗಿವೆ ಎಂದರು. ಬೈಟ್
ಪ್ರದರ್ಶನವನ್ನು ಯಶಸ್ವಿಗೊಳಿಸಲು ಗೌರಿ ಮಹಿಳಾ ಮಂಡಳದ ಅಧ್ಯಕ್ಷೆ ಶ್ರೀವತಿ ಬಾಗಿ, ಉಪಾದ್ಯಕ್ಷರಾದ ಆಶಾ ಹಿಡದುಗ್ಗಿ, ಕಾರ್ಯದರ್ಶಿ ಮೀನಾಕ್ಷಿ ಪಾಟೀಲ್ ಸೇರಿದಂತೆ ಇನ್ನುಳಿದವರು ಶ್ರಮವಹಿಸಿದರು.

Tags:

error: Content is protected !!