• ‘ಸಿಟಿಸ್ 2’ಗೆ ಪಾಲಿಕೆಯ ಮಹತ್ವದ ಅನುಮೋದನೆ
• ವಂತಿಕೆ ಶೇ. 20 ಭರಿಸಲು ಸರ್ವಾನುಮತ
• ಪಾರದರ್ಶಕ ಅನುಷ್ಠಾನಕ್ಕೆ ಸದಸ್ಯರ ಕಟ್ಟುನಿಟ್ಟಿನ ಆಗ್ರಹ
• ಅಭಿವೃದ್ಧಿ ಯೋಜನೆಗೆ ಬಲ ನೀಡಿದ ಸಭೆ

ಸಿಟಿಸ್ ಟೂ ಯೋಜನೆಗೆ ಮಹಾನಗರ ಪಾಲಿಕೆಯ ವಂತಿಗೆ ಶೇಕಡಾ 20 ರಷ್ಟು ಭರಿಸಲು ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ಮಹಾಪೌರ ಮಂಗೇಶ್ ಪವಾರ್ ಅವರು ಠರಾವು ಪಾಸ್ ಮಾಡಿದರು.
ಇಂದು ಬೆಳಗಾವಿ ಮಹಾನಗರ ಪಾಲಿಕೆಯ ಸಭೆಯಲ್ಲಿ ಮಹಾಪೌರ ಮಂಗೇಶ್ ಪವಾರ್ ಅವರು ಸಿಟಿಸ್ 2 ಕುರಿತು ಪರಿಷ್ಕೃತ ಮಾಹಿತಿಯನ್ನು ಸಭಾಗೃಹಕ್ಕೆ ಒದಗಿಸುವಂತೆ ಮಹಾನಗರ ಪಾಲಿಕೆ ಆಯುಕ್ತ ಕಾರ್ತೀಕ್ ಎಂ., ಅವರಿಗೆ ಸೂಚಿಸಿದರು. ಈ ವೇಳೆ ಆಯುಕ್ತರು ಸದಸ್ಯರು ಮಾಹಿತಿಯನ್ನು ನೀಡಿ, ಸದಸ್ಯರು ಇದರಲ್ಲಿ ಏನಾದರೂ ಸಲಹೆ ಸೂಚನೆಗಳಿದ್ದರೇ ನೀಡಬಹುದು ಎಂದರು.
ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಅವರು ಯೋಜನೆಯ ಕುರಿತು ಮಹಾಪೌರರ ನೇತೃತ್ವದಲ್ಲಿ ಕೂಲಂಕೂಷವಾಗಿ ಪರಿಶೀಲಿಸಲು ಮತ್ತೊಂದು ಸಭೆಯನ್ನು ಕರೆಯಬೇಕು. ಸಿಟಿಸ್ ಟೂ ಗೆ ಸಂಬಂಧಿಸಿದಂತೆ ತನ್ನ ವಂತಿಗೆ ಶೇಕಡಾ 20 ರಷ್ಟು ಭರಿಸಲು ಠರಾವು ಮಂಡಿಸಬೇಕೆಂದರು.
ಆಡಳಿತ ಪಕ್ಷದ ಸದಸ್ಯ ಸಂದೀಪ್ ಜೀರಗ್ಯಾಳ್ ಅವರು ಸಿಟಿಸ್ ಟೂ ಯೋಜನೆಗೆ ಮಹಾನಗರ ಪಾಲಿಕೆಯಿಂದ ಲೋಪವಾಗಬಾರದು. ಇದರ ಸದುಪಯೋಗವಾಗಬೇಕು. ಹಿಂದೆ ಬಂದ 7.5 ಕೋಟಿ ಅನುದಾನ ಬಳಕೆಯ ಮಾಹಿತಿಯನ್ನು ಎಂ.ಡಿ ಅವರು ನೀಡಬೇಕೆಂದರು. ಫ್ಲೋ
ಮಹಾಪೌರ ಮಂಗೇಶ್ ಪವಾರ್ ಅವರು ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ಸ್ಮಾರ್ಟ್ ಸಿಟಿ ನೋಡಿಕೊಳ್ಳಬೇಕು ಎಂದು ಹೇಳುತ್ತ, ಸರ್ವಾನುಮತದಿಂದ ಸಿಟಿಸ್ ಟೂ ಯೋಜನೆಗೆ ಮಹಾನಗರ ಪಾಲಿಕೆಯ ವಂತಿಗೆ ಶೇಕಡಾ 20 ರಷ್ಟು ಭರಿಸಲು ಠರಾವು ಪಾಸ್ ಮಾಡಿರುವುದಾಗಿ ತಿಳಿಸಿದರು.
