Belagavi

ಬೆಳಗಾವಿಯ ಡಾ.ಅಂಬೇಡ್ಕರ್ ಉದ್ಯಾನವನದಲ್ಲಿ ‘ಭೀಮಗಾಯನ’ ಶೀಘ್ರದಲ್ಲೇ ಡಾ. ಅಂಬೇಡ್ಕರರ ಹೊಸ ಮೂರ್ತಿಯ ಸ್ಥಾಪನೆ; ಶಾಸಕ ಆಸೀಫ್ ಸೇಠ್

Share

• ಬೆಳಗಾವಿಯಲ್ಲಿ ಮೊಳಗಿದ ‘ಭೀಮ ಗಾಯನ’ದ ದನಿ
• ಶೀಘ್ರದಲ್ಲೇ ಅಂಬೇಡ್ಕರ್’ರ ಮೂರ್ತಿ ಅಭಿವೃದ್ಧಿ
• ವರ್ಷದೊಳಗೆ ಉದ್ಯಾನವನದಲ್ಲಿ ಹೊಸ ಮೂರ್ತಿ ಸ್ಥಾಪನೆ
• ಶಾಸಕ ಆಸೀಫ್ ಸೇಠ್ ನೀಡಿದ ಭರವಸೆಗೆ ಅಭಿನಂದನೆ

ಶೀಘ್ರದಲ್ಲೇ ಬೆಳಗಾವಿಯ ಡಾ. ಅಂಬೇಡ್ಕರ್ ಉದ್ಯಾನದಲ್ಲಿರುವ ಬಾಬಾಸಾಹೇಬರ ಮೂರ್ತಿಯನ್ನು ಹೊಸದಾಗಿ ಪ್ರತಿಷ್ಠಾಪಿಸಿ ಅಭಿವೃದ್ಧಿಪಡಿಸುವುದಾಗಿ ಉತ್ತರ ಶಾಸಕ ಆಸೀಫ್ ಸೇಠ್ ಅವರು ಭರವಸೆಯನ್ನು ನೀಡಿದ್ದಾರೆ.

ಬೆಳಗಾವಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ವತಿಯಿಂದ ನಗರದ ಡಾ. ಅಂಬೇಡ್ಕರ್ ಉದ್ಯಾನವನದಲ್ಲಿ ಭೀಮ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉತ್ತರ ಶಾಸಕ ಆಸೀಫ್ ಸೇಠ್ ಅವರು ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ, ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು, ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ದೇಶದ ಎಲ್ಲ ಜಾತಿ ಧರ್ಮಗಳಿಗೆ ಸಮಾನ ಹಕ್ಕನ್ನು ನೀಡಿದ್ದಾರೆ. ಸಮಾಜದ ಮುಖಂಡರು ಉದ್ಯಾನವನದಲ್ಲಿರುವ ಬಾಬಾಸಾಹೇಬರ ಮೂರ್ತಿಯನ್ನು ಅಭಿವೃದ್ಧಿಪಡಿಸಲು ಮನವಿಯನ್ನು ಮಾಡಿದ್ದು, ಅದರಂತೆ ವರ್ಷದೊಳಗೆ ಕಾಮಗಾರಿಯನ್ನು ಮುಗಿಸಿ ಬಾಬಾಸಾಹೇಬರ ಹೊಸ ಮೂರ್ತಿಯನ್ನು ಸ್ಥಾಪಿಸಲಾಗುವುದು. ಅದಲ್ಲದೇ ಬಾಬಾಸಾಹೇಬರು ಬೆಳಗಾವಿಯಲ್ಲಿ ತಂಗಿದ್ದ ಮನೆಯನ್ನು ಕೂಡ ಸ್ಮಾರಕ ಮಾಡುವ ಉದ್ಧೇಶವಿದೆ. ಬಾಬಾಸಾಹೇಬರು ಕೇವಲ ಒಂದು ಜಾತಿ ಸಮುದಾಯಕ್ಕೆ ಸೂಕ್ತವಾಗಿಲ್ಲ. ಕೇವಲ ಜಯಂತಿಯಂದು ಅವರನ್ನು ನೆನೆಸುವ ಬದಲೂ ಸಂಪುರ್ಣ ವರ್ಷ ಅವರನ್ನು ನೆನೆಸುವ ಕಾರ್ಯವಾಗಬೇಕು. ಪ್ರೇರಣಾದಾಯಕವಾದ ಬಾಬಾಸಾಹೇಬರ ತತ್ವಾದರ್ಶಗಳನ್ನು ಸದಾ ಪಾಲಿಸಬೇಕೆಂದರು.

ಎಡಿಸಿ ವಿಜಯಕುಮಾರ್ ಹೊಣಕೇರಿ, ಮಹಾನಗರ ಪಾಲಿಕೆ ಉಪಾಯುಕ್ತ ಉದಯಕುಮಾರ್ ತಳವಾರ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರ ರಾಮನಗೌಡ ಕನ್ನೋಳ್ಳಿ, ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ರಾಯವ್ವಗೋಳ, ಮಲ್ಲೇಶ ಚೌಗಲೆ, ಇನ್ನುಳಿದ ಗಣ್ಯರು ವಿದ್ಯಾರ್ಥಿಗಳು ಕಲಾವಿದರು ಭಾಗಿಯಾಗಿದ್ಧರು.

Tags:

error: Content is protected !!