bagalkot

ಬಾಗಲಕೋಟೆಯಲ್ಲಿ ಪ್ರಥಮ್ ಮತ್ತು ಅಭಿಮಾನಿಗಳ ನಡುವೆ ವಾಕ್ಸಮರ: ‘ಡಿ ಬಾಸ್’ ಘೋಷಣೆಗೆ ನಟ ಗರಂ

Share

• ಬಾಗಲಕೋಟೆಯಲ್ಲಿ ನಟ ಪ್ರಥಮ್‌ಗೆ ಅಭಿಮಾನಿಗಳ ಮುಜುಗರ
• ‘ಡಿ ಬಾಸ್’ ಘೋಷಣೆಗೆ ಗರಂ ಆದ ಪ್ರಥಮ್
• ಮೂಲೆಗುಂಪು ಹೇಳಿಕೆ ವಿರೋಧಿಸಿ ಪ್ರಥಮ್ ಕಿಡಿ
• ಪಿಂಕ್ ವಾಕ್ ಕಾರ್ಯಕ್ರಮದ ಮುನ್ನವೇ ಗಲಾಟೆ

ಬಾಗಲಕೋಟೆಯ ಪಿಂಕ್ ವಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ನಟ ಪ್ರಥಮ್ ಅವರಿಗೆ ಅಭಿಮಾನಿಗಳು ‘ಡಿ ಬಾಸ್’ ಎಂದು ಘೋಷಣೆ ಕೂಗಿದ್ದರಿಂದ ಅಸಮಾಧಾನಗೊಂಡ ಘಟನೆ ನಡೆದಿದೆ. ಈ ವೇಳೆ ಪ್ರಥಮ್ ಮತ್ತು ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ವಿಡಿಯೋ ಇದೀಗ ವೈರಲ್ ಆಗಿದೆ
ಬಾಗಲಕೋಟೆಯ ಜಿಲ್ಲಾಡಳಿತ ಭವನದ ಮುಂದೆ ಪಿಂಕ್ ವಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ನಟ ಪ್ರಥಮ್‌ರನ್ನು ನೋಡುತ್ತಿದ್ದಂತೆ, ಅಲ್ಲಿದ್ದ ದರ್ಶನ್ ಅಭಿಮಾನಿಗಳು ಪದೇಪದೇ ‘ಡಿ ಬಾಸ್’, ‘ಡಿ ಬಾಸ್’ ಎಂದು ಘೋಷಣೆ ಕೂಗಲು ಆರಂಭಿಸಿದರು. ಸಾರ್ವಜನಿಕವಾಗಿ ಇಂತಹ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಪ್ರಥಮ್, ಅಭಿಮಾನಿಗಳ ವಿರುದ್ಧ ನೇರವಾಗಿಯೇ ಗರಂ ಆದರು.
ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಥಮ್, “ಈ ರೀತಿ ಹೇಳಿ ಹೇಳಿನೇ ನೀವು ಅವರನ್ನು ಮೂಲೆಗುಂಪು ಮಾಡಿದ್ದೀರಿ. ನಿಮ್ಮ ಈ ವರ್ತನೆ ಸರಿಯಲ್ಲ” ಎಂದು ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರಥಮ್ ಅವರ ಈ ಪ್ರತಿಕ್ರಿಯೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಸಿತು. ಕಾರ್ಯಕ್ರಮ ಆರಂಭಕ್ಕೂ ಮುನ್ನವೇ ನಡೆದ ಈ ಘಟನೆಯು ಸ್ಥಳದಲ್ಲಿದ್ದವರಲ್ಲಿ ಆಶ್ಚರ್ಯ ಮೂಡಿಸಿತು.
ಸದ್ಯ ಈ ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದರ್ಶನ್ ಅಭಿಮಾನಿಗಳು ಮತ್ತು ಪ್ರಥಮ್ ಬೆಂಬಲಿಗರ ನಡುವೆ ಪರ-ವಿರೋಧ ಚರ್ಚೆಗಳಿಗೆ ವೇದಿಕೆಯಾಗಿದೆ. ಸಾರ್ವಜನಿಕ ಸ್ಥಳದಲ್ಲಿ ನಟರೊಬ್ಬರು ಈ ರೀತಿ ಅಭಿಮಾನಿಗಳೊಂದಿಗೆ ವಾಗ್ವಾದ ನಡೆಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

Tags:

error: Content is protected !!