BELAGAVI

ಬೆಳಗಾವಿ ಉತ್ತರ ಶಾಸಕ ಆಸೀಫ್ ಸೇಠ್ ಅಬ್ಬರದ ಪ್ರವಾಸ: ಬೃಂದಾವನ ಕಾಲನಿ, ಬಸವನ ಕುಡಚಿಯಲ್ಲಿ ‘ಜನತಾ ದರ್ಬಾರ್’ ಮೂಲಕ ಅಹವಾಲು ಸ್ವೀಕಾರ

Share

ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಮಂತ್ರ ಎಂದಿರುವ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸಿಫ್ (ರಾಜು) ಸೇಠ್ ಅವರು, ಇಂದು ಬೃಂದಾವನ ಕಾಲನಿ, ಶಿಂದೋಳಿ ರಸ್ತೆ ಹಾಗೂ ಬಸವನ ಕುಡಚಿ ಭಾಗಗಳಲ್ಲಿ ಭರ್ಜರಿ ಮಿಂಚಿನ ಸಂಚಾರ ನಡೆಸಿದರು. ಅಧಿಕಾರಿಗಳೊಂದಿಗೆ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ ಅವರು, ಸ್ಥಳೀಯರ ಸಮಸ್ಯೆಗಳನ್ನು ಆಲಿಸಲು ‘ಜನತಾ ದರ್ಬಾರ್’ ನಡೆಸಿ ಗಮನ ಸೆಳೆದರು.

ತಮ್ಮ ಕ್ಷೇತ್ರದ ಪ್ರತಿಯೊಂದು ಓಣಿಯ ಸಮಸ್ಯೆಗಳನ್ನು ಅರಿಯುವ ಉದ್ದೇಶದಿಂದ ಶಾಸಕ ಆಸಿಫ್ ಸೇಠ್ ಅವರು ಇಂದು ಬೃಂದಾವನ ಕಾಲನಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಪ್ರಮುಖವಾಗಿ ರಸ್ತೆಗಳ ದುರಸ್ತಿ, ಚರಂಡಿ ವ್ಯವಸ್ಥೆ, ಕುಡಿಯುವ ನೀರು ಹಾಗೂ ನೈರ್ಮಲ್ಯದಂತಹ ಮೂಲಭೂತ ಸೌಕರ್ಯಗಳ ಬಗ್ಗೆ ನಿವಾಸಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಅಧಿಕಾರಿಗಳ ಸಮ್ಮುಖದಲ್ಲೇ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕರು, ಜನರ ದೈನಂದಿನ ಬದುಕಿಗೆ ತೊಂದರೆಯಾಗುತ್ತಿರುವ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡರು.

ಭೇಟಿಯ ವೇಳೆ ಮಾತನಾಡಿದ ಶಾಸಕರು, “ಕ್ಷೇತ್ರದ ಜನರೊಂದಿಗೆ ನೇರ ಸಂಪರ್ಕವಿದ್ದಾಗ ಮಾತ್ರ ಪಾರದರ್ಶಕ ಆಡಳಿತ ನೀಡಲು ಸಾಧ್ಯ. ಜನರ ಸಮಸ್ಯೆಗಳನ್ನು ಆಲಿಸುವುದು ನನ್ನ ಪ್ರಮುಖ ಆದ್ಯತೆ” ಎಂದು ತಿಳಿಸಿದರು. ಜನತಾ ದರ್ಬಾರ್‌ನಲ್ಲಿ ವ್ಯಕ್ತವಾದ ದೂರುಗಳನ್ನು ಕೂಡಲೇ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದು, ಯುದ್ಧೋಪಾದಿಯಲ್ಲಿ ಕೆಲಸ ಪೂರ್ಣಗೊಳಿಸುವ ಭರವಸೆ ನೀಡಿದರು. ಶಾಸಕರ ಈ ಜನಸ್ನೇಹಿ ನಡೆಯನ್ನು ಕಂಡು ಸ್ಥಳೀಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Tags:

error: Content is protected !!