BELAGAVI

ಬೆಳಗಾವಿ ಉತ್ತರ: ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡೆಸಿದ ಅಮಾನ್ ಸೇಠ್

Share

ಬೆಳಗಾವಿ ಉತ್ತರ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಅಮಾನ್ ಸೇಠ್ ಅವರು ವಿವಿಧ ಬಡಾವಣೆಗಳಲ್ಲಿ ಸ್ಥಳೀಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಕಾಮಗಾರಿಗಳ ಗುಣಮಟ್ಟದ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶಾಸಕ ಆಸೀಫ್ ಸೇಠ್ ಅವರ ಸೂಚನೆಯ ಮೇರೆಗೆ, ಅಮಾನ್ ಸೇಠ್ ಅವರು ಅಮಾನ್ ನಗರ, ಶಿಫಾ ಕಾಲೋನಿ ಮತ್ತು ಹಕೀಮ್ ಕಾಲೋನಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಈ ವೇಳೆ ಕಾಮಗಾರಿಗಳು ನಿಗದಿತ ಗುಣಮಟ್ಟದಲ್ಲಿ ಮತ್ತು ನಿಗದಿತ ಅವಧಿಯೊಳಗೆ ಪೂರ್ಣಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕ್ಷೇತ್ರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಅಮಾನ್ ಸೇಠ್, ಸ್ಥಳೀಯ ನಿವಾಸಿಗಳೊಂದಿಗೆ ಮುಕ್ತ ಸಂವಾದ ನಡೆಸಿದರು. ಈ ವೇಳೆ ನಾಗರಿಕರು ತಮ್ಮ ಬಡಾವಣೆಯ ಮೂಲಸೌಕರ್ಯಗಳ ಕುರಿತು ವ್ಯಕ್ತಪಡಿಸಿದ ಸಮಸ್ಯೆಗಳನ್ನು ಗಮನಿಸಿದ ಅವರು, ಆ ಕುರಿತಾದ ವರದಿಯನ್ನು ಶಾಸಕ ಆಸಿಫ್ (ರಾಜು) ಸೇಠ್ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಗಮನಕ್ಕೆ ತಂದು, ಆದ್ಯತೆಯ ಮೇರೆಗೆ ಪರಿಹರಿಸಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದರು.

Tags:

error: Content is protected !!