BELAGAVI

ಬಾಗಲಕೋಟೆ, ದಾವಣಗೆರೆ ಕಾಂಗ್ರೆಸ್ ಭದ್ರಕೋಟೆ…

Share

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು, ಉಪಚುನಾವಣೆ ಹಾಗೂ ಸ್ಥಳೀಯ ಸಮಸ್ಯೆಗಳ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ಒಗ್ಗಟ್ಟು ಮತ್ತು ಅಭಿವೃದ್ಧಿ ಕಾರ್ಯಗಳು ಪಕ್ಷಕ್ಕೆ ವರದಾನವಾಗಲಿವೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಜಿಲ್ಲಾ ಉಸ್ತುವಾರಿ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದವರಿಗೇ ಟಿಕೇಟ್ ನೀಡಬೇಕೆಂಬ ಕೂಗೂ ಕೇಳಿ ಬಂದಿತ್ತು. ನಮ್ಮ ನಿರೀಕ್ಷೆಯೂ ಇತ್ತು. ಹೈಕಮಾಂಡ್ ಕೂಡ ಅವರನ್ನೇ ಆಯ್ಕೆ ಮಾಡಿದೆ. ಇನ್ನು ಪಕ್ಷದ ಕಾರ್ಯಕರ್ತರಲ್ಲಿನ ಗಲಾಟೆಯ ಪರಿಣಾಮ ಉಪಚುನಾವಣೆ ಮೇಲೆ ಬೀರಲ್ಲ. ಒಡಕು ದೂರವಾಗಿ ಒಂದಾಗಿದ್ದಾರೆ. ಅಹಿಂದ್ ಮತಗಳು ಯಾವಾಗಲೂ ಕಾಂಗ್ರೆಸ್ ಪರವಾಗಿಯೇ ಇವೆ. ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ಬಗ್ಗೆ ಒಳ್ಳೆಯ ವಾತಾವರಣವಿದೆ. ಬಾಗಲಕೋಟೆಗೆ ಎಚ್.ವೈ ಮೇಟಿ ಅವರ ಆಸೆಯಂತೆ ಮೆಡಿಕಲ್ ಕಾಲೇಜು ಘೋಷಣೆಯಾಗಿದೆ. ಹಲವಾರು ಕೆಲಸಗಳಾಗಿವೆ. ಈಗಲೂ ಆಗುತ್ತಿವೆ. ಮೇಟಿ ಕುಟುಂಬದವರಲ್ಲಿದ್ದ ಭಿನ್ನಮತ ಶಮನವಾಗಿದೆ. ಬಾಗಲಕೋಟೆ ಮತ್ತು ದಾವಣೆಗೆರೆ ಕಾಂಗ್ರೆಸ್ಸಿನ ಭದ್ರಕೋಟೆಯಾಗಿವೆ. ಇನ್ನು ಕುಟುಂಬ ರಾಜಕಾರಣವೆನಿಲ್ಲ. ಎಲ್ಲ ಪಕ್ಷದಲ್ಲಿಯೂ ಒಂದೇ ಪರಿಸ್ಥಿತಿಯಿದೆ. ಅಭ್ಯರ್ಥಿಗಳನ್ನು ಜನರು ಒಪ್ಪಬೇಕು ಎಂದರು.

ಇನ್ನು ತುರಮುರಿ ಗ್ರಾಮಸ್ಥರಿಂದ ಕಸ ವಿಲೇವಾಗಿ ಘಟಕ ರದ್ಧತಿಗೆ ಆಗ್ರಹಿಸಿ ಜನಪ್ರತಿನಿಧಿಗಳ ಮನೆ ಮುಂದೆ ಧರಣಿ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ದಕ್ಷಿಣ ಶಾಸಕರು ಮಹಾನಗರ ಪಾಲಿಕೆಗೆ ಹೆಡ್. ಕಸ ವಿಲೇವಾರಿ ಮಾಡುವುದು ಅವರ ಜವಾಬ್ದಾರಿ. ಗಂಭೀರವಾಗಿ ಇದನ್ನು ಪರಿಗಣಿಸಬೇಕು. ಮಹಾಪೌರರಾಗಲಿ, ಶಾಸಕರಾಗಲಿ, ಸಿಎಂ, ಸಚಿವರು, ಜಿಲ್ಲಾಧಿಕಾರಿಗಳನ್ನು ಭೇಟಿಯಾಗದ ಹಿನ್ನೆಲೆ ಸಮಸ್ಯೆ ಪರಿಹಾರವಾಗಲ್ಲ. ಮಹಾಪೌರರನ್ನು ಆಯ್ಕೆ ಮಾಡುವುದೇ ಒಂದು ದೊಡ್ಡ ಸಾಧನೆಯಾಗಿ ಬಿಟ್ಟಿದೆ. ಮಹಾಪೌರರು ಹೊರಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಬೇಕೆಂದರು.

ಸೈಬರ್ ಕ್ರೈಂನ್ನು ನೇರವಾಗಿ ಬೆಂಗಳೂರಿನಿಂದ ನಿಯಂತ್ರಿಸಲಾಗುತ್ತಿದೆ ಎಂದರು. ಭವಿಷ್ಯದಲ್ಲಿ ಸೈಬರ್ ಕ್ರೈಂ ಪತ್ತೆ ಹಚ್ಚುವುದೇ ಪೊಲೀಸ್ ಇಲಾಖೆಗೆ ಅತಿದೊಡ್ಡ ಕೆಲಸವಾಗಲಿದೆ ಎಂದರು. ಇನ್ನು ಎಲ್ ಪಿ ಜಿ ಪೂರೈಕೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಹೆಚ್ಚಿನ ಎಲ್.ಪಿ.ಜಿ ತರುವ ಅಧಿಕಾರವಿಲ್ಲ. ಕೇಂದ್ರದಿಂದಲೇ ಪೂರೈಕೆ ಕಡಿಮೆಯಾದಾಗ ಸ್ಥಳೀಯವಾಗಿ ಪೂರೈಕೆ ಕಡಿಮೆಯಾಗುತ್ತದೆ. ಗೃಹೋಪಯೋಗಿ ಬಳಕೆಗೆ ಯಾವುದೇ ತೊಂದರೆಯಿಲ್ಲ. ಕಮರ್ಷಿಯಲ್ ಮಾತ್ರ ಸಮಸ್ಯೆಯಾಗುತ್ತಿದೆ ಎಂದರು.

Tags:

error: Content is protected !!