BELAGAVI

ಬೆಳಗಾವಿ: ಆಟೋ ರಿಕ್ಷಾ ಚಾಲಕರಿಂದ ಅರ್ಥಪೂರ್ಣ ರಾಮನವಮಿ ಆಚರಣೆ

Share

ಬೆಳಗಾವಿಯ ಕ್ಯಾಂಪ್ ಪ್ರದೇಶದ ರಾಮಘಾಟ್ ರಸ್ತೆಯಲ್ಲಿ ಇಂದು ರಾಮನವಮಿಯ ಸಡಗರ ಕಂಡುಬಂತು. ಶ್ರೀ ಗಣೇಶ್ ಯೂನಿಯನ್ ಜಿಮ್‌ಖಾನಾ ಆಟೋ ರಿಕ್ಷಾ ಸ್ಟ್ಯಾಂಡ್‌ನ ಸದಸ್ಯರು ಭಕ್ತಿಯಿಂದ ಶ್ರೀರಾಮನ ಜನ್ಮದಿನವನ್ನು ಆಚರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಬೆಳಗಾವಿಯ ಕ್ಯಾಂಪ್ ರಾಮಘಾಟ್ ರಸ್ತೆಯ ಶ್ರೀ ಗಣೇಶ್ ಯೂನಿಯನ್ ಜಿಮ್‌ಖಾನಾ ಆಟೋ ರಿಕ್ಷಾ ಸ್ಟ್ಯಾಂಡ್ ವತಿಯಿಂದ ಶ್ರೀ ರಾಮ ನವಮಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಚಾಲಕ ಮಿತ್ರರೆಲ್ಲರೂ ಒಂದಾಗಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು. ಕಾಯಕದ ಜೊತೆಗೆ ಧಾರ್ಮಿಕ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಳ್ಳುವ ಮೂಲಕ ಚಾಲಕರು ಆದರ್ಶ ಮೆರೆದರು.

ರಾಮನವಮಿಯ ನಿಮಿತ್ತ ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ಉಪಹಾರವನ್ನು ಪ್ರಸಾದದ ರೂಪದಲ್ಲಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಸುಂದರ್ ಕುರುಬರ್, ಮಾರುತಿ ಯಾದವ್, ರೂಪೇಶ್ ಪಾಟೀಲ್, ನಾರಾಯಣ ನರೇರ್, ಬಬನ್ ಭೋಬೆ, ಗಜಾನನ ಕೋಲಕಾರ, ಪ್ರಶಾಂತ್ ಡಾಂಗೆ, ಭರಮಣ್ಣಾ ಕಾಂಬಳೆ ಸೇರಿದಂತೆ ಸಂಘದ ಸದಸ್ಯರು ಹಾಗೂ ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Tags:

error: Content is protected !!