Athani

ಅಥಣಿಯಲ್ಲಿ ಸಾವಿರಾರು ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ: ಮಹಿಳಾ ದಿನಾಚರಣೆಗೆ ‘ಭರವಸೆ ಬೆಳಕು’ ಸಜ್ಜು

Share

ಮಹಿಳೆ ಸಮಾಜದ ಕಣ್ಣು, ಆಕೆಯ ಸಬಲೀಕರಣವೇ ದೇಶದ ಪ್ರಗತಿ ಎಂಬ ಆಶಯದೊಂದಿಗೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಪಟ್ಟಣದ ಪ್ರಸಿದ್ಧ ಸಾಮಾಜಿಕ ಸಂಸ್ಥೆಯಾದ ‘ಭರವಸೆ ಬೆಳಕು ಫೌಂಡೇಶನ್’ ವತಿಯಿಂದ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಭರವಸೆಯೇ ಬೆಳಕು ಫೌಂಡೇಶನ್ ವತಿಯಿಂದ ಬರುವ ದಿನಾಂಕ 31-03-2026 ರದ್ದು ವಿಶ್ವ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಅಥಣಿ ತಾಲೂಕಿನ ಸಹಸ್ರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ

ಇದೇ ಸಂದರ್ಭದಲ್ಲಿ ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷರಾದ ರೂಪ ಕಾಂಬಳೆ ಮಾತನಾಡಿ ನಮ್ಮ ಸಂಸ್ಥೆಯು ಈಗಾಗಲೇ ನೂರಾರು ಮಹಿಳೆಯರು ಸಾವಲಂಬಿಯಾಗಿ ಬದುಕಲು ಹಲವಾರು ರೀತಿಯ ಟ್ರೇನಿಂಗಗಳನ್ನು ನೀಡಿ ಸ್ವಂತ ಉದ್ಯಮವನ್ನು ಪ್ರಾರಂಭಿಸಿದ್ದಾರೆ ಸಮಾಜದಲ್ಲಿ ಮಹಿಳೆಯರ ಬಗ್ಗೆ ಇರುವ ಕೀಳರಿಮೆಯನ್ನು ನಮ್ಮ ಸಂಸ್ಥೆಯು ತೊಡೆದುಹಾಕುತ್ತಿದೆ ಬಾಲ್ಯ ವಿವಾಹ ತಡೆದು ಉತ್ತಮ ಬದುಕು ನೀಡುತ್ತದೆ ಹಾಗೆಯೇ ಬರುವ ದಿನಾಂಕ 31-03-2026 ರಂದು ಸುಕ್ಷೇತ್ರ ಗಚ್ಚಿನ ಮಠದ ಅವರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಶ್ರೀಮತಿ ಡಾ.. ನಾಗಲಕ್ಷ್ಮಿ ಚೌದರಿ ಗೌರವಾನ್ವಿತ ಅಧ್ಯಕ್ಷರು ಕರ್ನಾಟಕ ರಾಜ್ಯ ಮಹಿಳಾ ಆಯೋಗ ಭಾಗವಹಿಸಿದ್ದಾರೆ ತಾಲೂಕಿನ ಸಮಸ್ತ ಗುರುಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು

ಇದೆ ಸಂದರ್ಭದಲ್ಲಿ ಭರವಸೆ ಬೆಳಕು ಪೌಂಡೇಶನ್ (ರಿ) ಅಥಣಿ ಸಂಸ್ಥಾಪಕ ಅಧ್ಯಕ್ಷರು ರೂಪಾ ಕಾಂಬಳೆ ಕಾದಬಂರಿ ಅಕ್ಕೋಳ ರಾಣಿ ಬಡಿಗೇರ ಸವಿತಾ ಕಾಂಬಳೆ ವೖಶಾಲಿ ಮೆಲ್ಗಡೆ ಗೀತಾ ಮಡ್ಡಿ ಭಾರತಿ ಬಿಜಾಪೂರೆ ಉಪಸ್ಥಿತರಿದ್ದರು

Tags:

error: Content is protected !!