Hukkeri

ಹುಕ್ಕೇರಿ : ಪವಿತ್ರ ರಂಜಾನ ತಿಂಗಳಿನಲ್ಲಿ ಮಕ್ಕಳಿಗೆ ಕುರಾಣ ವಿತರಿಸಿದ ಅರೇಬಿಕ್ ಶಾಲೆ

Share

ಹುಕ್ಕೇರಿ ನಗರದ ಟಿಪ್ಪು ಸುಲ್ತಾನ ಶಿಕ್ಷಣ ಸಂಸ್ಥೆಯ ಹಜರತ್ ದಾದಾ ಕಲಾಮಿ ಅರೇಬಿಕ್ ಶಾಲೆಯಲ್ಲಿ ಪವಿತ್ರ ರಂಜಾನ ತಿಂಗಳಿನಲ್ಲಿ ಮಕ್ಕಳಿಗೆ ಉಚಿತವಾಗಿ ಕುರಾಣ ವಿತರಣಾ ಸಮಾರಂಭ ಜರುಗಿತು.

ಹಜರತ್ ದಾದಾಕಲಾಮಿ ಅರೇಬಿಕ್ ಶಾಲೆಯಲ್ಲಿ ಎಂಟನೆ ತರಗತಿಯಿಂದ ಮೂರು ವರ್ಷಗಳ ಕಾಲ ಕುರಾಣ ಕುರಿತು ಅಧ್ಯಯನ ಮಾಡಿ ತೆರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಬೆಳಗಾವಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ಶಿಕ್ಷಣ ಸಂಸ್ಥೆಗಳ ಅದ್ಯಕ್ಷ ಇಕ್ಬಾಲ್ ಪೀರಜಾದೆ ಉಚಿತವಾಗಿ ಕುರಾಣ ಗ್ರಂಥ,ಪ್ರಮಾಣ ಪತ್ರ ಹಾಗೂ ಹಿಜಾಬ್ ನೀಡಿ ಗೌರವಿಸಿದರು.

ವೇದಿಕೆ ಮೇಲೆ ಮುಖ್ಯಸ್ಥರಾದ ಮುಫ್ತಿ ಅಬ್ದುಲ್ ಹುಸೇ ಅಜಹರಿ , ಸಂಸ್ಥೆಯ ಕಾರ್ಯದರ್ಶಿ ಶಾಹೀದ್ ರಜ ಪೀರಜಾದೆ ಆಡಳಿತ ಮಂಡಳಿ ಸದಸ್ಯರಾದ ಇರ್ಷಾದ ಮೊಕಾಶಿ, ಡಿ ಆರ್ ಖಾಜಿ, ಹುಸೇನ ಶೇಕಬಡೆ, ಎಂ ಆರ್ ಮೋಕಾಶಿ, ಜಾಹಾಂಗೀರ ಇನಾಮದಾರ, ಕಲಂದರ ಮೋಕಾಶಿ ಉಪಸ್ಥಿತರಿದ್ದರು.
ಕುರಾಣ ಅದ್ಯಯನ ಮಾಡಿದ ವಿದ್ಯಾರ್ಥಿಗಳಿಗೆ ಗಣ್ಯರು ಕುರಾಣ ವಿತರಿಸಿ ಶುಭ ಹಾರಿಸಿದರು.
ಸಂಸ್ಥೆಯ ಅದ್ಯಕ್ಷ ಇಕ್ಬಾಲ್ ಅಹಮ್ಮದ ಪೀರಜಾದೆ ಮಾತನಾಡಿ ಈ ಭಾಗದ ವ೮ದ್ಯಾರ್ಥಿಗಳು ಉರ್ದು ಕಲಿಯಲು ಬೆಳಗಾವಿ ಮತ್ತು ಬೇರೆ ನಗರಗಳಿಗೆ ಹೋಗುವ ಸಂದರ್ಭದಲ್ಲಿ ನಮ್ಮ ಪೂರ್ವಜರು ದಾದಾ ಕಲಾಮಿಯ ಜಮಿನಿನಲ್ಲಿ ಉರ್ದು ಶಾಲೆಯನ್ನು ಕೇವಲ ನಾಲ್ಕು ಮಕ್ಕಳಿಂದ ಪ್ರಾರಂಭಿಸಿದ ಶಾಲೆ ದೇವರ ಕೃಪೆಯಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಮಟ್ಟದ ಶಿಕ್ಷಣ ಪಡೆದು ಆದರ್ಶ ಜೀವನ ನಡೆಸುತ್ತಿದ್ದಾರೆ, ಇದು ನಮ್ಮ ಸಂಸ್ಥೆಯ ಹೇಮ್ಮೆಯ ವಿಚಾರವಾಗಿದೆ ಎಂದರು .


ಈ ಸಂದರ್ಭದಲ್ಲಿ ದಾದಾ ಕಲಾಮಿಯಾ ಅರೇಬಿಕ್ ಶಾಲೆಯ ಪ್ರಾಂಶುಪಾಲರಾದ ಮೋಹಮ್ಮದ ನಶೀಮ ಅಹಮ್ಮದ, ಅಂಜರ ಅಹಮ್ಮದ ಖಾನ ಹಾಗೂ ಟಿಪ್ಪು ಸುಲ್ತಾನ ಅಂಗ ಸಂಸ್ಥೆಗಳ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags:

error: Content is protected !!