ತನಗೆ ಸಾರಾಯಿ ಬೇಕು ಎಂದು ಕುಡಕನೊರ್ವ ಹುಚ್ಚಾಟ ನಡೆಸಿದ ಘಟನೆ ನಡೆದಿದೆ. ಮೊಬೈಲ್ ಟವರ್ ಏರಿ ಕುಡುಕನು ಹುಚ್ಚಾಟ ಮೆರೆದ ಘಟನೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ ಶ್ರೀಶೈಲ್ ಟವರ್ ಹತ್ತಿ ಹುಚ್ಚಾಟ ಮೆರೆದ ವ್ಯಸನಿಯಾಗಿದ್ದು ಈತ ಕಳೆದ ಎರಡು ವರ್ಷದಲ್ಲಿ ಎರಡೂ ಬಾರಿ ಟವರ್ ಹತ್ತಿ ಹುಚ್ಚಾಟ ಮಾಡಿರೋ ವ್ಯಕ್ತಿಯಾಗಿದ್ದಾನೆ. ಕೋಟ್ಯಾಳ ಗ್ರಾಮದ ನಿವಾಸಿ ಈ ಶ್ರೀಶೈಲ್ ಮದ್ಯ ವ್ಯಸನಿಯಾಗಿದ್ದು ಆಗಾಗ್ಗ ಮೊಬೈಲ್ ಟವರ್‌ಗಳನ್ನ ಹತ್ತಿ ಹುಚ್ಚಾಟ ಮೆರೆಯುತ್ತಿರುತ್ತಾನೆ. ಮತ್ತೇ ಇದೀಗ ಹುಚ್ಚಾಟ ಮೆರೆದಿದ್ದಾನೆ. ಮದ್ಯ ಕೊಟ್ಟರೆ ವಾಪಸ್ ಬರ್ತಿನಿ ಎನ್ನುತ್ತಿದ್ದ ಸ್ಥಳಕ್ಕೆ ತಿಕೋಟ ಪೊಲೀಸರ ದೌಡಾಯಿಸಿ ಕೆಳಗೆ ಇಳಿಸಿದರು.
