BELAGAVI

ಮಾನವೀಯತೆ ಮರೆತ ಕಾಮಪಿಶಾಚಿ ತಂದೆ: ಸ್ವಂತ ಮಗಳ ಮೇಲೆಯೇ ನಿರಂತರ ಅತ್ಯಾಚಾರ; ನರರಾಕ್ಷಸನಿಗೆ ಹೆಂಡತಿಯೇ ಸಾಥ್!

Share

ಸಮಾಜ ತಲೆತಗ್ಗಿಸುವಂತ ಅಮಾನವೀಯ ಘಟನೆಯೊಂದು ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಕ್ಷಿಸಬೇಕಾದ ತಂದೆಯೇ ಭಕ್ಷಕನಾಗಿ ತನ್ನ ಅಪ್ರಾಪ್ತ ಮಗಳ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಈ ಕ್ರೌರ್ಯಕ್ಕೆ ಸ್ವಂತ ತಾಯಿಯೇ ಸಾಥ್ ನೀಡಿರುವುದು ಮನುಕುಲವೇ ಅಸಹ್ಯ ಪಡುವಂತಿದೆ.

ಬೆಳಗಾವಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬವೊಂದರಲ್ಲಿ ಈ ಘೋರ ಕೃತ್ಯ ನಡೆದಿದೆ. ಕಳೆದ ಕೆಲವು ದಿನಗಳಿಂದ ತನ್ನ ಅಪ್ರಾಪ್ತ ಮಗಳ ಮೇಲೆ ತಂದೆ ನಿರಂತರವಾಗಿ ಅತ್ಯಾಚಾರ ಎಸಗುತ್ತಾ ಬಂದಿದ್ದ ಎನ್ನಲಾಗಿದೆ. ಈ ಪ್ರಕರಣದಲ್ಲಿ ಆಘಾತಕಾರಿ ವಿಷಯವೆಂದರೆ, ಮಗಳನ್ನು ಕಾಪಾಡಬೇಕಾದ ತಾಯಿ ಕೂಡ ತನ್ನ ಗಂಡನ ಈ ನೀಚ ಕೃತ್ಯಕ್ಕೆ ಪರೋಕ್ಷವಾಗಿ ಸಹಕರಿಸಿದ್ದಾಳೆ. ಸಂತ್ರಸ್ತ ಬಾಲಕಿಯ ಸಂಕಷ್ಟಕ್ಕೆ ಸ್ಪಂದಿಸಿದ ಮಾರ್ಕೆಟ್ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಕಾಮಪಿಶಾಚಿ ತಂದೆಯನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಮಾರ್ಕೆಟ್ ಪೊಲೀಸ್ ಠಾಣೆಯ ಅಧಿಕಾರಿಗಳು, ಇಂದು (ಶನಿವಾರ) ಆರೋಪಿ ತಂದೆಯನ್ನು ಬೆಳಗಾವಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪವಿತ್ರವಾದ ತಂದೆ-ಮಗಳ ಸಂಬಂಧಕ್ಕೆ ಕಪ್ಪುಚುಕ್ಕೆ ಹಚ್ಚಿದ ಈ ಘಟನೆಯಿಂದಾಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ.

Tags:

error: Content is protected !!