Vijaypura

ಪರಾಭವ ನಾಮ ಸಂವತ್ಸರಕ್ಕೆ ಅದ್ದೂರಿ ಸ್ವಾಗತ: ಝಳಕಿ ಗ್ರಾಮದಲ್ಲಿ ಯುಗಾದಿ ಸಂಭ್ರಮ

Share

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಗ್ರಾಮದಲ್ಲಿ ಯುಗಾದಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಷಾಸ್ತ್ರೋಕ್ತವಾಗಿ ಬ್ರಾಹ್ಮಣರಿಂದ ಪಂಚಾಂಗ ಪಠಣ ನಡೆಯಿತು. ಮುಂಬರುವ ದಿನಗಳಲ್ಲಿ ಮಳೆ, ಬೆಳೆಯ ಸ್ಥಿತಿ ಹಾಗೂ ಇತರ ಭವಿಷ್ಯಫಲಗಳನ್ನು ಪಂಚಾಂಗದ ಮೂಲಕ ವಿವರಿಸಲಾಯಿತು.

ಹಿಂದೂ ಹೊಸ ವರ್ಷದ ಪ್ರಾರಂಭವಾದ ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದೆಯ (ಪಾಡ್ಯಮಿ) ದಿನದಂದು ನೂತನ ಸಂವತ್ಸರ ಆರಂಭಗೊಂಡಿದ್ದು, ವಿಶ್ವಾವಸು ನಾಮ ಸಂವತ್ಸರಕ್ಕೆ ವಿದಾಯ ಹೇಳಿ ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ ಕೋರಲಾಯಿತು. ಜೊತೆಗೆ ಕಲಿಯುಗ ವರ್ಷ 5127 ಮುಕ್ತಾಯಗೊಂಡು 5128ನೇ ವರ್ಷ ಆರಂಭಗೊಂಡಿದ್ದು, ಶ್ರೀ ಶಾಲಿವಾಹನ ಶಕೆ 1947 ಮುಕ್ತಾಯವಾಗಿ 1948 ಆರಂಭವಾಗಿದೆ.
ಈ ವಿಶೇಷ ದಿನದ ಅಂಗವಾಗಿ ಗ್ರಾಮದ ಆರಾಧ್ಯ ದೈವವಾದ ಶ್ರೀ ಬೀರಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಂತರ ಗ್ರಾಮಸ್ಥರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ತಿಳಿಸಿ, ಹೊಸ ವರ್ಷ ಎಲ್ಲರಿಗೂ ಸುಖ, ಸಮೃದ್ಧಿ ಮತ್ತು ಶಾಂತಿ ತರಲೆಂದು ಪ್ರಾರ್ಥಿಸಲಾಯಿತು.

Tags:

error: Content is protected !!