BELAGAVI

ಹೆಸ್ಕಾಂನಲ್ಲಿ 40 ವರ್ಷಗಳ ಸುದೀರ್ಘ ಸೇವೆ: ಲೆಕ್ಕಾಧಿಕಾರಿ ಸುನೀತಾ ಎಂ.ಪಿ. ಅವರಿಗೆ ಅದ್ಧೂರಿ ನಿವೃತ್ತಿ ಬಿಳ್ಕೊಡುಗೆ!

Share

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ಬೆಳಗಾವಿ ನಗರ ವಿಭಾಗದಲ್ಲಿ ನಾಲ್ಕು ದಶಕಗಳ ಕಾಲ ಪ್ರಾಮಾಣಿಕ ಸೇವೆ ಸಲ್ಲಿಸಿದ ಲೆಕ್ಕಾಧಿಕಾರಿ ಸುನೀತಾ ಎಂ.ಪಿ. ಅವರಿಗೆ ಇಲಾಖೆಯ ವತಿಯಿಂದ ಭಾವಪೂರ್ಣ ವಿದಾಯ ಕೋರಲಾಯಿತು. ವಯೋನಿವೃತ್ತಿ ಹೊಂದಿದ ಸುನೀತಾ ಅವರ ಸೇವೆಯನ್ನು ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದರು.

ಬೆಳಗಾವಿ ನಗರ ವಿಭಾಗದ ಆಂತರಿಕ ಲೆಕ್ಕ ಪರಿಶೋಧನಾ ವಿಭಾಗದಲ್ಲಿ ಲೆಕ್ಕಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸುನೀತಾ ಎಂ.ಪಿ. ಅವರು ಫೆಬ್ರವರಿ 28ರಂದು ಸೇವೆಯಿಂದ ನಿವೃತ್ತರಾದರು. ಈ ಹಿನ್ನೆಲೆಯಲ್ಲಿ ಭರತೇಶ ಜೈನರ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಂಘಟನೆಯಲ್ಲಿ ಶಿಸ್ತು ಮತ್ತು ಲೆಕ್ಕಪತ್ರ ನಿರ್ವಹಣೆಯಲ್ಲಿ ಅವರು ತೋರಿದ ದಕ್ಷತೆಯನ್ನು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.
ಈ ಸಮಾರಂಭದಲ್ಲಿ ಮಾರುತಿ ದೊಡಮನಿ, ಸದಾನಂದ ಕುರೇರ, ರಮೇಶ್ ಬೀಳಗಿ, ಸುಧೀರ ಕೋಟಗಿ ಸೇರಿದಂತೆ ಇಲಾಖೆಯ ಪ್ರಮುಖರಾದ ದಿಲೀಪ ದೊಡ್ಡಮನಿ, ಮನೀಶ್ ದೇಶಪಾಂಡೆ, ಬಿ.ಬಿ.ಮೋಳಕೆ, ಸುಮಂಗಲಾ ಭಜಂತ್ರಿ, ಈರಣ್ಣ ಮಾಲಗಾರ, ಸುವರ್ಣಾ ಬಡಿಗೇರ ಹಾಗೂ ಶ್ರೀಧರ ತಿಗಡಿ ಉಪಸ್ಥಿತರಿದ್ದರು. ಸಹೋದ್ಯೋಗಿಗಳು ಸುನೀತಾ ಅವರಿಗೆ ಫಲಪುಷ್ಪ ನೀಡಿ, ಮುಂದಿನ ವಿಶ್ರಾಂತ ಜೀವನ ಸುಖಮಯವಾಗಿರಲಿ ಎಂದು ಹಾರೈಸಿದರು.

Tags:

error: Content is protected !!