Vijaypura

ಭೀಮಾತೀರದಲ್ಲಿ ವ್ಯಕ್ತಿಯ ಹತ್ಯೆಗೈದು ಸುಟ್ಟು ಹಾಕಿ ದುಷ್ಕರ್ಮಿಗಳು ಎಸ್ಕೇಪ್

Share

ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ದುಷ್ಕರ್ಮಿಗಳು ಓರ್ವನ ಬರ್ಬರ ಹತ್ಯೆಗೈದು ಸುಟ್ಟು ಹಾಕಿರುವ ಘಟನೆ ನಡೆದಿದೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತೆನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲಾ, ಹತ್ಯೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ‌. ಗುರುಬಸಯ್ಯ ರೇವಯ್ಯ ಹಿರೇಮಠ (72) ಹತ್ಯೆಯಾಗಿದ್ದು, ಗುರುಬಸಯ್ಯನ ಹತ್ಯೆಗೈದು ಮುಖಕ್ಕೆ ಬೆಂಕಿ ಹಚ್ಚಿ ಹತ್ಯ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Tags:

error: Content is protected !!